ಅಹಮದಾಬಾದ್: ಸತತವಾಗಿ ಸುರಿಯುತ್ತಿರುವ ಭಾಳೆ ಮಳೆಯಿಂದಾಗಿ ಉತ್ತರ ಗುಜರಾತ್ ತತ್ತರಿಸಿದ್ದು, ಪ್ರವಾಹ ಪೀಡಿತ ಬನಸ್ಕಾಂತ ಜಿಲ್ಲೆಯಲ್ಲಿ 61 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 218ಕ್ಕೆ ಏರಿಕೆಯಾಗಿದೆ.
ಬನಸ್ಕಾಂತ ಜಿಲ್ಲೆಯಲ್ಲಿ 61 ಜನರು ಹಾಗೂ ಪಟಾನ್ ಜಿಲ್ಲೆಯಲ್ಲಿ 7 ಮಂದಿ ಸಾವನ್ನಪ್ಪಿದ್ದು, ಪ್ರವಾಹ ಪರಿಣಾಮ ಈವರೆಗೂ 218 ಜನರು ಮೃತಪಟ್ಟಿದ್ದಾರೆಂದು ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರವಾಹದಿಂದಾ ಉತ್ತರ ಗುಜರಾತ್ ಭಾರೀ ಸಂಕಷ್ಟದಲ್ಲಿ ಸಿಲುಕಿದ್ದು, 4.5 ಲಕ್ಷದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಿದೆ. ಈ ವರೆಗೂ 39 ಸಾವಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದ್ದು, ಕಳೆದ ವಾರ ಭಾರತೀಯ ಸೇನೆ, ವಾಯುಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ನಡೆದಿ ಕಾರ್ಯಾಚರಣೆಯಲ್ಲಿ ಒಟ್ಟು 11,400 ಜನರನ್ನು ರಕ್ಷಣೆ ಮಾಡಲಾಗಿದೆ.
ಪ್ರವಾಹ ಪೀಡಿತ ಬನಸ್ಕಾಂತ ಮತ್ತು ಪಟಾನ್ ಪ್ರದೇಶಗಳಿಗೆ ಗುಜರಾತ್ ರಾಜ್ಯ ಮುಖ್ಯಮಂತ್ರಿ ವಿಜಯ್ ರುಪಾನಿಯವರು ಭೇಟಿ ನೀಡಿದ್ದು, ಪರಿಸ್ಥಿತಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.