ನವದೆಹಲಿ: ಮೂರು ವರ್ಷಗಳ ಹಿಂದೆ ನಾಪತ್ತೆಯಾಗಿರುವ 39 ಭಾರತೀಯ ಪ್ರಜೆಗಳ ಕುರಿತಂತೆ ನಮ್ಮ ಬಳಿ ಯಾವುದೇ ಮಾಹಿತಿಗಳಿಲ್ಲ ಎಂದು ಭಾರತದಲ್ಲಿರುವ ಸಿರಿಯಾ ರಾಯಭಾರಿ ರಿಯಾದ್ ಕಮೆಲ್ ಅಬ್ಬಾಸ್ ಅವರು ಮಂಗಳವಾರ ಹೇಳಿದ್ದಾರೆ.
ಭಾರತೀಯರ ನಾಪತ್ತೆ ಪ್ರಕರಣ ಕುರಿತಂತೆ ಸಿರಿಯಾ ಗುಪ್ತಚರ ಇಲಾಖೆಯ ಮುಖ್ಯಸ್ಥರು ಸೇರಿದಂತೆ ಹಲವಾರು ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಭಾರತದ ಅಧಿಕಾರಿಗಳು ಹಲವು ಬಾರಿ ಸಿರಿಯಾ ಹಾಗೂ ಇರಾಕ್'ಗೆ ಭೇಟಿ ನೀಡಿದ್ದಾರೆ. ಭೇಟಿ ವೇಳೆ ಭಾರತೀಯ ಕುರಿತಂತೆ ಮಾಹಿತಿ ಕೇಳಿದ್ದಾರೆ. ನಾಪತ್ತೆಯಾಗಿರುವ ಭಾರತೀಯರು ಪತ್ತೆಯಾಗಿದ್ದೇ ಆದಲ್ಲಿ ಅವರನ್ನು ಅವರ ತಾಯಿನಾಡಿಗೆ ಕಳುಹಿಸುತ್ತೇವೆಂದು ಹೇಳಿದ್ದಾರೆ.
ನಾಪತ್ತೆಯಾಗಿರುವ ಭಾರತೀಯರ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ. ಅಧಿಕೃತವಾಗಿಯೂ ಯಾವ ಮಾಹಿತಿಗಳೂ ಲಭಿಸಿಲ್ಲ. ಒಂದು ನಾಪತ್ತೆಯಾಗಿರುವ ಭಾರತೀಯರು ನಮ್ಮ ನೆಲದಲ್ಲಿ ದೊರಕಿದ್ದೇ ಆದರೆ, ಅವರನ್ನು ಭಾರತಕ್ಕೆ ಒಪ್ಪಿಸುತ್ತೇವೆಂದು ತಿಳಿಸಿದ್ದಾರೆ.