ದೇಶ

ಉಗ್ರರಿಗೆ ಹಣ ಸಹಾಯ: ಎನ್ಐಎಯಿಂದ ಗಿಲಾನಿ ಅಳಿಯ ಅಲ್ತಾಫ್​​ ಫಂತೂಷ್ ವಿಚಾರಣೆ

Srinivas Rao BV
ನವದೆಹಲಿ: ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ್ದ ಎನ್ಐಎ, ಈಗ ಪ್ರತ್ಯೇಕತಾವಾದಿ ಗಿಲಾನಿ ಅಳಿಯ ಅಲ್ತಾಫ್ ಫಂತೂಷ್ ವಿಚಾರಣೆ ನಡೆಸಿದೆ. 
ಕಾಶ್ಮೀರದಲ್ಲಿ ಅಸ್ಥಿರತೆ ಉಂಟು ಮಾಡಲು ಉಗ್ರರಿಗೆ ಪ್ರತ್ಯೇಕತಾವಾದಿಗಳು ಆರ್ಥಿಕ ಸಹಾಯ ಮಾಡುತ್ತಿರುವ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿದೆ. ಶ್ರೀನಗರದಲ್ಲಿರುವ ಗಿಲಾನಿ ಶಾ ನಿವಾಸದ ಮೇಲೆ ದಾಳಿ ನಡೆಸಿದ್ದಾಗ ಅಲ್ತಾಫ್ ಫಂತೂಷ್ ಬಗ್ಗೆ ಎನ್ಐಎ ಮಾಹಿತಿ ಸಂಗ್ರಹಿಸಿದ್ದು, ನಂತರ ವಿಚಾರಣೆಗೊಳಪಡಿಸಿದೆ. 
ಪ್ರತ್ಯೇಕತಾವಾದಿ ಗಿಲಾನಿ ಅಳಿಯ ಫಂತೂಷ್ ತೆಹ್ರೀಕ್-ಎ-ಹುರಿಯತ್ ನಲ್ಲೂ ಪ್ರಭಾವಿ ವ್ಯಕ್ತಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಜೂ.03 ರಂದು ಎನ್ಐಎ ಜಮ್ಮು-ಕಾಶ್ಮೀರದ 26 ಪ್ರದೇಶಗಳಲ್ಲಿ ದಾಳಿ ನಡೆಸಿತ್ತು. 
SCROLL FOR NEXT