ಸಾಂದರ್ಭಿಕ ಚಿತ್ರ 
ದೇಶ

ಉ.ಪ್ರ: ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡಿದರೆ ಹುಷಾರ್!

ವಾಹನ ಚಾಲನೆ ಮಾಡಿ ಅಪಘಾತಕ್ಕೀಡಾಗುವ ಪ್ರಕರಣಗಳನ್ನು ತಗ್ಗಿಸಲು ಕ್ರಮ ಕೈಗೊಂಡಿರುವ ಉತ್ತರ ಪ್ರದೇಶ ಸಾರಿಗೆ ...

ಲಕ್ನೋ: ವಾಹನ ಚಾಲನೆ ಮಾಡಿ ಅಪಘಾತಕ್ಕೀಡಾಗುವ ಪ್ರಕರಣಗಳನ್ನು ತಗ್ಗಿಸಲು ಕ್ರಮ ಕೈಗೊಂಡಿರುವ ಉತ್ತರ ಪ್ರದೇಶ ಸಾರಿಗೆ ನಿಗಮ ಹೊಸ ಕ್ರಮ ಕೈಗೊಂಡಿದೆ. 
ಉತ್ತರ ಪ್ರದೇಶ ರಾಜ್ಯ ಸಾರಿಗೆ ಸಚಿವಾಲಯ ಹೊಸ ಕ್ರಮ ಕೈಗೊಂಡಿದ್ದು ಅದರ ಪ್ರಕಾರ, ಬಸ್ಸು ಚಾಲನೆ ಮಾಡುತ್ತಿರುವಾಗ ಚಾಲಕರು ಮೊಬೈಲ್ ನಲ್ಲಿ ಮಾತನಾಡುವುದು ಕಂಡರೆ ಪ್ರಯಾಣಿಕರು ಅವರಿಗೆ ಗೊತ್ತಾಗದಂತೆ ಹಿಂಬದಿಯಿಂದ ಫೋಟೋ ತೆಗೆದು ವಾಟ್ಸಾಪ್ ನಲ್ಲಿ ಸಾರಿಗೆ ಇಲಾಖೆಗೆ ಕಳುಹಿಸಬೇಕು.
ಚಾಲನೆಯಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯ ಕಂಡು ಪೋಟೋ ತೆಗೆದು ಕಳುಹಿಸಿದ ಪ್ರಯಾಣಿಕರಿಗೆ ಬಹುಮಾನ ನೀಡಲಾಗುತ್ತದೆ.
ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆಯನ್ನು ತಡೆಯಲು ನೀತಿ ನಿಯಮಗಳಿದ್ದರೂ ಕೂಡ ಅದನ್ನು ಪಾಲಿಸುವವರು ಕಡಿಮೆ. ಈ ಬಗ್ಗೆ ನಿತ್ಯವೂ ದೂರುಗಳು ಬರುತ್ತಿರುತ್ತವೆ. ಅನೇಕ ಅಪಘಾತಗಳು ಸಂಭವಿಸುತ್ತಿರುತ್ತವೆ. ಇದನ್ನು  ತಡೆಯಲು ಬಸ್ಸು ಅಥವಾ ಇತರ ವಾಹನ ಚಾಲನೆ ಮಾಡುವಾಗ ಮೊಬೈಲ್ ನಲ್ಲಿ ಚಾಲಕರು ಮಾತನಾಡುತ್ತಿರುವುದು ಕಂಡುಬಂದರೆ ಪ್ರಯಾಣಿಕರು ಫೋಟೋ ತೆಗೆದು ಸಾರಿಗೆ ಇಲಾಖೆಯ ವಾಟ್ಸಾಪ್ ಸಂಖ್ಯೆಗೆ ಕಳುಹಿಸಬಹುದು ಎಂದು ಉತ್ತರ ಪ್ರದೇಶ ಸಾರಿಗೆ ಸಚಿವ ಸ್ವತಂತ್ರ ದೇವ್ ಸಿಂಗ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಪ್ರಯಾಣಿಕರು ಕಳುಹಿಸಿದ ಫೋಟೋ ಸಿಕ್ಕಿದ ನಂತರ ಸಂಬಂಧಪಟ್ಟ ಚಾಲಕರಿಗೆ ದಂಡ ಹಾಕಲಾಗುತ್ತದೆ ಮತ್ತು ಪ್ರಯಾಣಿಕರಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದರು.        

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

SCROLL FOR NEXT