ಅಬು ಸಲೇಂ 
ದೇಶ

1993 ಮುಂಬೈ ಸರಣಿ ಸ್ಫೋಟ: ಅಬು ಸಲೇಂ ಸೇರಿ 6 ಮಂದಿ ದೋಷಿಗಳು; ಟಾಡಾ ಕೋರ್ಟ್ ತೀರ್ಪು

1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದ ತೀರ್ಪು 24 ವರ್ಷಗಳ ನಂತರ ಪ್ರಕಟವಾಗಿದ್ದು, ಸಂಚು ರೂಪಿಸಿ, ಸ್ಫೋಟ ನಡೆಸಿದ್ದ ದೋಸಾ ಸಹೋದರರು ದೋಷಿಗಳೆಂದು ಮುಂಬೈ ನ ಟಾಡಾ ನ್ಯಾಯಾಲಯ

ಮುಂಬೈ: 1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದ ತೀರ್ಪು 24 ವರ್ಷಗಳ ನಂತರ ಪ್ರಕಟವಾಗಿದ್ದು, ಸಂಚು ರೂಪಿಸಿ, ಸ್ಫೋಟ ನಡೆಸಿದ್ದ ಮುಸ್ತಾಫಾ ದೋಸಾ, ಆತನ ಸಹೋದರ ಮೊಹಮ್ಮದ್ ದೋಸಾ, ತಾಹಿರ್ ಮರ್ಚೆಂಟ್, ಅಬು ಸಲೇಂ ಸೇರಿದಂತೆ 6  ಆರೋಪಿಗಳನ್ನು ಮುಂಬೈ ನ ಟಾಡಾ ನ್ಯಾಯಾಲಯ ಅಪರಾಧಿಗಳೆಂದು ತೀರ್ಪು ಪ್ರಕಟಿಸಿದೆ. ಆರೋಪಿಗಳ ಪೈಕಿ ರಿಯಾಜ್ ಸಿದ್ದಿಕಿಯನ್ನು ಕೋರ್ಟ್ ನಿರ್ದೋಷಿ ಎಂದು ತೀರ್ಪು ಪ್ರಕಟಿಸಿದ್ದು ಖುಲಾಸೆಗೊಳಿಸಿದೆ 
1993 ರ ಮಾರ್ಚ್.12 ರಂದು ನಡೆದಿದ್ದ ಸರಣಿ ಸ್ಫೋಟದಲ್ಲಿ 257 ಜನರು ಮೃತಪಟ್ಟಿದ್ದರೆ, 715 ಜನರು ಗಂಭೀರವಾಗಿ ಗಾಯಗೊಂಡಿದ್ದರು ಹಾಗೂ 27 ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಹಾನಿಯುಂಟಾಗಿತ್ತು. 
ಪ್ರಕರಣದ ಪ್ರಮುಖ ಆರೋಪಿಗಳಾದ ಮುಸ್ತಫಾ ದೋಸಾ, ಮೊಹಮ್ಮದ್ ದೋಸಾ,  ಮೊಹಮ್ಮದ್ ತಾಹಿರ್ ಅಪರಾಧಿಗಳೆಂದು ಮುಂಬೈ ನ ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಸ್ಫೋಟಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿ ಸಹಕರಿಸಿದ್ದ ಫಿರೋಜ್ ರಶೀದ್ ಖಾನ್   ಸಹ ಅಪರಾಧಿಗಳೆಂದು ನ್ಯಾಯಾಲಯ ಹೇಳಿದೆ. 
ಸ್ಫೋಟ ಪ್ರಕರಣದಲ್ಲಿ ಅಬು ಸಲೇಂ ಸಹ ಭಾಗಿಯಾಗಿದ್ದು, 20೦5 ರಲ್ಲಿ ಆತನನ್ನು ಪೋರ್ಚುಗಲ್ ನಲ್ಲಿ ಬಂಧಿಸಿ ಭಾರತಕ್ಕೆ ಕರೆತರಲಾಗಿತ್ತು. ಪ್ರಕರಣದ ಮತ್ತೋರ್ವ ಆರೋಪಿ ಮುಸ್ತಾಫಾ ದೋಸಾ  ನನ್ನು ಯುಎಇ ಯಿಂದ ಬಂಧಿಸಿ ಕರೆ ತರಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!