ದೇಶ

ಸಿಬಿಎಸ್ಇ 12ನೇ ತರಗತಿ ಫಲಿತಾಂಶ: ಒಟ್ಟು ಅಂಕಗಳಲ್ಲಿ ಭಾರೀ ಲೋಪದೋಷ

Sumana Upadhyaya
ನವದೆಹಲಿ: ಇತ್ತೀಚೆಗೆ ಪ್ರಕಟಗೊಂಡ ಸಿಬಿಎಸ್ಇಯ 12ನೇ ತರಗತಿ ಪರೀಕ್ಷೆಯ ಫಲಿತಾಂಶದ ಒಟ್ಟು ಅಂಕಗಳಲ್ಲಿ ಹಲವು ತಪ್ಪುಗಳು, ಲೋಪದೋಷಗಳಿದ್ದವು ಎಂದು ಅನೇಕ ವಿದ್ಯಾರ್ಥಿಗಳು ದೂರು ನೀಡಿದ್ದು, ದೊಡ್ಡ ಅವ್ಯವಸ್ಥೆ ನಡೆದಿದೆ ಎಂದು ಊಹಿಸಲಾಗಿದೆ.
ದೆಹಲಿಯ ವಿದ್ಯಾರ್ಥಿನಿಯೊಬ್ಬಳು  ಎಲ್ಲಾ ವಿಷಯಗಳಲ್ಲಿ 90ಕ್ಕೂ ಹೆಚ್ಚು ಅಂಕ ಗಳಿಸಿದ್ದು, ಗಣಿತದಲ್ಲಿ ಕೇವಲ 68 ಅಂಕ ಬಂದಾಗ ನಿಜಕ್ಕೂ ಆಘಾತಕ್ಕೊಳಗಾದಳು. ಮತ್ತೊಬ್ಬ ವಿದ್ಯಾರ್ಥಿನಿ ಇಂಗ್ಲಿಷ್, ಬ್ಯುಸಿನೆಸ್ ಸ್ಟಡೀಸ್ ಮತ್ತು ಫೈನ್ ಆರ್ಟ್ಸ್ ನಲ್ಲಿ ಉತ್ತಮ ಅಂಕ ಗಳಿಸಿದ್ದರೆ ಗಣಿತದಲ್ಲಿ ಅವಳಿಗೆ ಕೇವಲ 42 ಅಂಕಗಳು ಬಂದಿದ್ದವು.
ಇಬ್ಬರು ವಿದ್ಯಾರ್ಥಿಗಳು ಸಿಬಿಎಸ್ಇಗೆ ಮರು ಮೌಲ್ಯಮಾಪನಕ್ಕೆ ಹಾಕಿದಾಗ ಅವರ ಅಂಕಗಳು 90ಕ್ಕೇರಿದ್ದವು. ಇಂತಹ ಸಾಕಷ್ಟು ಕೇಸುಗಳು ಆಗಿದ್ದವು.
ಅಂಕಗಳ ಪರಿಶೀಲನೆಗೆ ಅಸಂಖ್ಯಾತ ಅರ್ಜಿಗಳು ಬಂದಿವೆ. ಆದರೆ ಎಷ್ಟು ಬಂದಿವೆ ಎಂದು ಸಿಬಿಎಸ್ಇ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಸಿಬಿಎಸ್ಇ, ನ್ಯಾಯಾಂಗ ಆದೇಶದ ನಂತರವೇ ಮರು-ಮೌಲ್ಯಮಾಪನ ಸಾಧ್ಯವಾದಾಗ ಪರಿಶೀಲನೆ ಅನುಮತಿ ನೀಡುತ್ತದೆ.
ವರದಿ ಪ್ರಕಾರ, ಒಟ್ಟು ಅಂಕಗಳ ಎಣಿಕೆಯಲ್ಲಿ ತಪ್ಪಾಗಿದ್ದು, ಇದಕ್ಕೆ ಹಲವು ಕಾರಣಗಳಿರಬಹುದು ಎಂದು ಸಿಬಿಎಸ್ಇಯ ಹಿರಿಯ ಅಧಿಕಾರಿಗಳು ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
SCROLL FOR NEXT