ಮಿಥಿಲಿ ರಾಜ್ 
ದೇಶ

ನೆಚ್ಚಿನ ಕ್ರಿಕೆಟಿಗ ಯಾರೆಂದು ಕೇಳಿದ ಪತ್ರಕರ್ತನಿಗೆ ಟೀಂ ಇಂಡಿಯಾ ನಾಯಕಿ ಮಿಥಿಲಿ ರಾಜ್ ತರಾಟೆ

"ನಿಮ್ಮ ನೆಚ್ಚಿನ ಮಹಿಳಾ ಕ್ರಿಕೆಟರ್ ಯಾರೆಂದು ಎಂದಾದರೂ ಪುರುಷ ಕ್ರಿಕೆಟಿಗರಿಗೆ ಕೇಳಿದ್ದೀರಾ"? ಹೀಗೆಂದು ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದು ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕಿ ಮಿಥಿಲಿ ರಾಜ್.

"ನಿಮ್ಮ ನೆಚ್ಚಿನ ಮಹಿಳಾ ಕ್ರಿಕೆಟರ್ ಯಾರೆಂದು ಎಂದಾದರೂ ಪುರುಷ ಕ್ರಿಕೆಟಿಗರಿಗೆ ಕೇಳಿದ್ದೀರಾ"? ಹೀಗೆಂದು ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದು ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕಿ ಮಿಥಿಲಿ ರಾಜ್.
ಮಹಿಳಾ ವಿಶ್ವ ಕಪ್ ಗೂ ಮುನ್ನ ನಡೆದ ಭೋಜನ ಕೂಟ ಹಾಗೂ ಮಾಧ್ಯಮ ರೌಂಡ್ ಟೇಬಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಿಥಿಲಿ ರಾಜ್ ಗೆ ಪತ್ರಕರ್ತರೊಬ್ಬರು " ನಿಮ್ಮ ನೆಚ್ಚಿನ ಪುರುಷ ಕ್ರಿಕೆಟಿಗ ಯಾರು ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಯಿಂದ ಅಸಮಾಧಾನಗೊಂಡ ಮಿಥಿಲಿ ರಾಜ್, "ನಿಮ್ಮ  ನೆಚ್ಚಿನ ಮಹಿಳಾ ಕ್ರಿಕೆಟರ್ ಯಾರು ಎಂದು ಯಾವಾಗಲಾದರೂ ಪುರುಷ ಕ್ರಿಕೆಟಿಗರನ್ನು ಕೇಳಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. 
ಮಹಿಳಾ ಕ್ರಿಕೆಟಿಗರನ್ನು ಪುರುಷ ಕ್ರಿಕೆಟಿಗರಿಗೆ ಹೋಲಿಕೆ ಮಾಡುವುದು ಸೂಕ್ತ ಅಲ್ಲ ಎಂದು ಮಿಥಿಲಿ ರಾಜ್ ಅಭಿಪ್ರಾಯಪಟ್ಟಿದ್ದು, ಮಹಿಳಾ ಕ್ರಿಕೆಟಿಗರಿಗೆ ಪುರುಷ ಕ್ರಿಕೆಟಿಗರಷ್ಟು ಮನ್ನಣೆ, ಪ್ರಚಾರ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 
ಮಹಿಳಾ ಕ್ರಿಕೆಟಿಗರಿಗೆ ಹೆಚ್ಚಿನ ಪ್ರಚಾರ ಸಿಗುವುದಿಲ್ಲ. ಬಿಸಿಸಿಐ ಕಳೆದ ಎರಡು ಸರಣಿಗಳನ್ನು ನೇರ ಪ್ರಸಾರ ಮಾಡಿಸಿದೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಮನ್ನಣೆ ದೊರೆತಿದೆಯಾದರೂ, ಮಹಿಳಾ ಕ್ರಿಕೆಟಗರನ್ನು ಇನ್ನಷ್ಟು ಗುರುತಿಸುವ ಅಗತ್ಯವಿದೆ ಎಂದು ಮಿಥಿಲಿ ರಾಜ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್