ಲಖನೌ: ಶಿಯಾ ವಕ್ಫ್ ಬೋರ್ಡ್ ನ ಸದಸ್ಯರನ್ನು ವಜಾಗೊಳಿಸಿದ್ದ ಉತ್ತರ ಪ್ರದೇಶ ಸರ್ಕಾರದ ಆದೇಶವನ್ನು ಅಲಹಾಬಾದ್ ಕೋರ್ಟ್ ರದ್ದುಗೊಳಿಸಿದ್ದು, 6 ಶಿಯಾ ವಕ್ಫ್ ಬೋರ್ಡ್ ಸದಸ್ಯರ ಸ್ಥಾನಮಾನವನ್ನು ಮರುಸ್ಥಾಪನೆ ಮಾಡುವಂತೆ ಆದೇಶ ನೀಡಿದೆ.
ನ್ಯಾ. ರಂಜನ್ ರಾಯ್ ಹಾಗೂ ಎಸ್ಎ ಅಗ್ನಿಹೋತ್ರಿ ಅವರಿದ್ದ ರಜೆ ಪೀಠ ಉತ್ತರ ಪ್ರದೇಶ ಸರ್ಕಾರದ ಆದೇಶವನ್ನು ವಿಚಾರಣೆ ನಡೆಸಲು ಅವಕಾಶ ನೀಡದೇ ಇರುವ ಆಧಾರದಲ್ಲಿ ರದ್ದುಗೊಳಿಸಿದ್ದು, ಸಧ್ಯಕ್ಕೆ 6 ವಕ್ಫ್ ಸದಸ್ಯರ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ಆದೇಶ ನೀಡಿದೆ.
ಇದೇ ವೇಳೆ ವಕ್ಫ್ ಬೋರ್ಡ್ ಗಳಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಮುಂದುವರೆಯುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ವಕ್ಫ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಂಡಿದ್ದ ಉತ್ತರ ಪ್ರದೇಶ ಸರ್ಕಾರ, ಅಕ್ರಮ ನಡೆದಿದ್ದ ವಕ್ಫ್ ಬೋರ್ಡ್ ಗಳನ್ನು ವಿಸರ್ಜನೆಗೊಳಿಸಿ, ಅಕ್ರಮದಲ್ಲಿ ಭಾಗಿಯಾಗಿದ್ದ ವಕ್ಫ್ ಸದಸ್ಯರನ್ನು ವಜಾಗೊಳಿಸಿ ಜೂ.16 ರಂದು ಆದೇಶ ಹೊರಡಿಸಿತ್ತು.