ಪ್ರಧಾನಮಂತ್ರಿ ನರೇಂದ್ರ ಮೋದಿ 
ದೇಶ

ಸೀಮಿತ ದಾಳಿ ಕುರಿತು ಯಾವುದೇ ದೇಶ ಪ್ರಶ್ನೆ ಮಾಡಿಲ್ಲ; ಪ್ರಧಾನಿ ಮೋದಿ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯಿದ್ದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿ ಬಗ್ಗೆ ಯಾವುದೇ ದೇಶ ಪ್ರಶ್ನೆ ಮಾಡಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ...

ವಾಷಿಂಗ್ಟನ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯಿದ್ದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿ ಬಗ್ಗೆ ಯಾವುದೇ ದೇಶ ಪ್ರಶ್ನೆ ಮಾಡಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ. 

ವರ್ಜೀನಿಯಾದ ರಿಟ್ಜ್ ಕಾರ್ಲ್ಟನ್'ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕದ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿರುವ ಅವರು, ಭಯೋತ್ಪಾದನೆಯೆಂಬುದು ಒಂದು ದೇಶದ ಶಾಂತಿ ಹಾಗೂ ಜನರ ಸಾಮಾನ್ಯ ಜೀವನವನ್ನು ನಾಶಪಡಿಸುತ್ತದೆ. ಭಯೋತ್ಪಾದನೆ ವಿರುದ್ಧ ದನಿ ಎತ್ತಿದ್ದ ಭಾರತ ಗಡಿ ನಿಯಂತ್ರಣ ರೇಖೆ ಬಳಿ ಸೀಮಿತ ದಾಳಿ ನಡೆಸಲು ಹಿಂಜರಿಯಲಿಲ್ಲ. ಸೀಮಿತ ದಾಳಿ ಮೂಲಕ ಭಾರತ ಉಗ್ರವಾದದ ವಿರುದ್ಧವಿದ್ದ ನಿಲುವನ್ನು ಸಮರ್ಥಿಸಿಕೊಂಡಿತ್ತು ಎಂದು ಹೇಳಿದ್ದಾರೆ.
 
20 ವರ್ಷಗಳ ಹಿಂದೆ ಭಯೋತ್ಪಾದನೆ ಕುರಿತಂತೆ ನಾವು ಮಾತನಾಡಿದ್ದಾಗ, ಇದೊಂದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎಂದು ಸಾಕಷ್ಟು ರಾಷ್ಟ್ರಗಳು ಹೇಳಿದ್ದವು. ನಮ್ಮ ಮಾತುಗಳು ಅಂದು ಯಾರಿಗೂ ಅರ್ಥವಾಗಿರಲಿಲ್ಲ. ಭಯೋತ್ಪಾದನೆಯೆಂದರೇನು ಎಂಬುದನ್ನು ಉಗ್ರರೇ ಇಡೀ ವಿಶ್ವಕ್ಕೆ ಅರ್ಥ ಮಾಡಿಸಿದ್ದಾರೆ. 

ಪಿಒಕೆ ಗಡಿ ನಿಯಂತ್ರಣ ರೇಖೆ ಬಳಿ ನಾವು ಸೀಮಿತ ದಾಳಿ ನಡೆಸಿದಾಗ ನಮ್ಮ ಶಕ್ತಿಯೇನೆಂಬುದು ಇಡೀ ವಿಶ್ವಕ್ಕೆ ಮನವರಿಕೆಯಾಯಿತು. ನಮ್ಮ ಶಾಂತಿಗೆ ಧಕ್ಕೆಯುಂಟಾದರೆ, ಭಾರತ ದನಿ ಎತ್ತಲಿದೆ, ರಕ್ಷಣಾಗಾಗಿ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡಲಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ಮಣ್ಣಿನಲ್ಲಿ ನಡೆಯುತ್ತಿದ್ದ ಉಗ್ರರ ಕೇಂದ್ರಗಳ ವಿರುದ್ಧ ಸೀಮಿತ ದಾಳಿ ನಡೆಸುವ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೆ, ಭಾರತದ ಈ ಕ್ರಮವನ್ನು ಯಾವುದೇ ಒಂದು ರಾಷ್ಟ್ರಕೂಡ ಪ್ರಶ್ನೆ ಮಾಡಲಿಲ್ಲ. ಸೀಮಿತ ದಾಳಿಯಿಂದ ಯಾವ ರಾಷ್ಟ್ರಕ್ಕೆ ಹೊಡೆತ ಬಿದ್ದಿದೆ ಎಂಬುದು ಬೇರೆ ವಿಚಾರ ಎಂದು ಪಾಕಿಸ್ತಾನ ರಾಷ್ಟ್ರದ ಹೆಸರನ್ನೇ ಎತ್ತದೆ ತಿರುಗೇಟು ನೀಡಿದರು. 

ಇದಲ್ಲದೆ, ಚೀನಾಗೂ ತಿರುಗೇಟು ನೀಡಿದ ಅವರು, ತನ್ನ ಗುರಿಗಳನ್ನು ಸಾಧಿಸುವ ಸಲುವಾಗಿ ಜಾಗತಿಕ ಆದೇಶಗಳಿಗೆ ಧಕ್ಕೆಯುಂಟು ಮಾಡುವ ಯಾವುದೇ ಯತ್ನವನ್ನು ಭಾರತ ಎಂದಿಗೂ ಮಾಡುವುದಿಲ್ಲ. ಭಾರತ ಸಂಪ್ರದಾಯ ಹಾಗೂ ಸಂಸ್ಕೃತಿಯುಳ್ಳ ನಾಡು. ಅಂತರಾಷ್ಟ್ರೀಯ ಕಾನೂನುಗಳಿಗೆ ನಾವು ತಲೆ ಬಾಗಿದ ಮೇಲೆ ಎಲ್ಲಾ ರೀತಿಯ ಆಲೋಚನೆಗಳನ್ನು ವಸುದೈವ ಕುಟುಂಬಕಂ (ವಿಶ್ವ ಒಂದೇ ಕುಟುಂಬ) ಪಾಲನೆ ಮಾಡುತ್ತೇವೆ. ಇದು ನಮ್ಮ ವ್ಯಕ್ತಿತ್ವ ಜಾಗತಿಕ ಆದೇಶಗಳ ವಿರುದ್ದ ಎಂದಿಗೂ ನಾವು ನಿಲ್ಲುವುದಿಲ್ಲ. ಅಂತರಾಷ್ಟ್ರೀಯ ಕಾನೂನು ಹಾಗೂ ಆದೇಶಗಳನ್ನು ನಾವು ಪಾಲನೆ ಮಾಡುತ್ತೇವೆ. ದೇಶದ ಸಾರ್ವಭೌಮತ್ವ, ಭದ್ರತೆ ಹಾಗೂ ಶಾಂತಿ ಕಾಪಾಡುವ ಸಲುವಾಗಿ ನಾವು ಎಂತಹದ್ದೇ ಕಠಿಣ ಕ್ರಮ ಕೈಗೊಳ್ಳಲು ಸಾಮರ್ಥ್ಯ ಹೊಂದಿದ್ದೇವೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ