ದೇಶ

ಮೂರು ದೇಶಗಳ ನಾಲ್ಕು ದಿನಗಳ ಪ್ರವಾಸದಲ್ಲಿ ಪ್ರಧಾನಿ ಮೋದಿ ವಿಮಾನ ಕಳೆದದ್ದು ಕೇವಲ 33 ಗಂಟೆ!

Sumana Upadhyaya
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊನ್ನೆಯಷ್ಟೇ ಪೋರ್ಚುಗಲ್, ಅಮೆರಿಕಾ ಮತ್ತು ನೆದರ್ಲ್ಯಾಂಡ್ ದೇಶಗಳ ನಾಲ್ಕು ದಿನಗಳ(120 ಗಂಟೆ) ಪ್ರವಾಸ ಮುಗಿಸಿಕೊಂಡು ಬಂದಿದ್ದು, ಅದರಲ್ಲಿ 33 ಗಂಟೆಗಳನ್ನು ಏರ್ ಇಂಡಿಯಾ ಒನ್ ವಿಮಾನದ ಪ್ರಯಾಣದಲ್ಲಿ ಕಳೆದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ಪ್ರಕಟಿಸಿದೆ.
ಪ್ರಧಾನಿ ಮೋದಿಯವರು ಜೂನ್ 24ರಂದು ಬೆಳಗ್ಗೆ 7 ಗಂಟೆಗೆ ಪೋರ್ಚ್ ಗಲ್ ಗೆ ಪ್ರಯಾಣಿಸಿ ಅಲ್ಲಿಂದ ವಾಷಿಂಗ್ಟನ್ ಗೆ ಅದೇ ದಿನ ಸಂಜೆ ಹೊಟೇಲ್ ನಲ್ಲಿ ಕೂಡ ಉಳಿದುಕೊಳ್ಳದೆ ಹೋಗಿದ್ದಾರೆ. ನಂತರ 8 ಗಂಟೆಗಳ ಕಾಲ ವಿಮಾನದಲ್ಲಿ ಪ್ರಯಾಣಿಸಿ ಮರುದಿನ ಬೆಳಗ್ಗೆ ಅಂದರೆ ಭಾನುವಾರ ಅಮೆರಿಕಾ ತಲುಪಿದ್ದರು.
ಮೂರನೇ ದಿನ ಮೋದಿ, ಅಮ್ಸ್ಟರ್ಡಾಮ್ ಗೆ ಸೋಮವಾರ ರಾತ್ರಿ ಹೊರಟರು. ನೆದರ್ಲ್ಯಾಂಡ್ ನಲ್ಲಿ 12 ಗಂಟೆಗಳ ಕಾಲ ಕೂಡ ಇರಲಿಲ್ಲ. ಡಚ್ ಪ್ರಧಾನಿ ಮಾರ್ಕ್ ರುಟ್ಟೆ, ಅಲ್ಲಿನ ಮುಖ್ಯ ಕಾರ್ಯ ನಿರ್ವಹಕಾಧಿಕಾರಿಗಳು ಮತ್ತು ಇತರ ಅಧಿಕಾರಿಗಳನ್ನು ಭೇಟಿ ಮಾಡಿ ಸಾಯಂಕಾಲ 7 ಗಂಟೆಗೆ ದೆಹಲಿಗೆ ಪ್ರಯಾಣ ಬೆಳೆಸಿದರು.
ನಿನ್ನೆ ಬೆಳಗ್ಗೆ 6 ಗಂಟೆಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೋದಿಯವರನ್ನು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಬರಮಾಡಿಕೊಂಡರು.
ಮೋದಿಯವರ ಮೂರು ರಾಷ್ಟ್ರಗಳ  ಪ್ರವಾಸದ ಪ್ರಮುಖಾಂಶ ಜೂನ್ 26ರಂದು ವಾಷಿಂಗ್ಟನ್ ನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ್ದು.  
SCROLL FOR NEXT