ನವದೆಹಲಿ: ಸಿಕ್ಕಿಂನಲ್ಲಿರುವ ಕೈಲಾಶ ಮಾನಸ ಸರೋವರ ಯಾತ್ರೆಯನ್ನು ರದ್ದುಗೊಳಿಸಿರುವುದಾಗಿ ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ-ಚೀನಾ ಗಡಿಯಲ್ಲಿ ಉಭಯ ದೇಶಗಳ ಸೇನಾಪಡೆಗಳು ಮುಖಾಮುಖಿಯಿಂದ ಸಿಕ್ಕಿಂನಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಕೈಲಾಶ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.
ಸರ್ಕಾರದ ಈ ನಿರ್ಧಾರದಿಂದಾಗಿ ಸುಮಾರ 800 ಯಾತ್ರಾರ್ಥಿಗಳ ಶಿವನ ದರ್ಶನಕ್ಕೆ ತೊಂದರೆಯಾಗಿದೆ. ಆದರೆ ಜಾರ್ಖಂಡ್ ನ ಲಿಪುಲೇಖ್ ಪಾಸ್ ಮೂಲಕ ಕೈಲಾಶ ಯಾತ್ರೆಗೆ ಅವಕಾಶ ನೀಡಲಾಗಿದೆ.