ಶ್ರೀನಗರ: 2016 ರಲ್ಲಿ ನಡೆದ ಉರಿ ಉಗ್ರ ದಾಳಿಕೋರರ ಮೇಲೆ ಸರ್ಜಿಕಲ್ ಸ್ಟ್ರೈಕ್ ಯಾವುದೇ ಪರಿಣಾಮ ಬೀರಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಸಚಿವರಿಗೆ ಅವಮಾನಕರವಾದ ಪ್ರಶ್ನೆ ಕೇಳಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಸರ್ಜಿಕಲ್ ಸ್ಟ್ರೈಕ್ ನಡೆಸಲಾಯಿತು ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
ಟಿವಿ ನಿರೂಪಕಿಯೊಬ್ಬರ ಪ್ರಶ್ನೆ ಪಾಕಿಸ್ತಾನದ ಜೊತೆಗಿನ ಘರ್ಷಣೆಗೆ ಪ್ರಚೋದನೆ ನೀಡಿತು. ನಾವು ಸುರಕ್ಷಿತವಾಗಿದ್ದೇವೆ ಎಂಬ ಭಾವನೆ ಮೂಡಿಸಲು ಸರ್ಜಿಕಲ್ ಸ್ಟ್ರೈಕ್ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಹೇಳಿದ್ದಾರೆ.
ಸೆಪ್ಟಂಬರ್ 28 ಮತ್ತು 29 ರ ರಾತ್ರಿಯಂದು ಗಡಿ ನಿಯಂತ್ರಣ ಭಾಗದಲ್ಲಿನ 7 ಉಗ್ರರ ಶಿಬಿರಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಲಾಯಿತು. ಇದಾದ ಕೆಲ ದಿನಗಳಲ್ಲಿ ಉರಿ ದಾಳಿ ಉಗ್ರರಿಗೆ ಶಿಕ್ಷಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ಉರಿ ಸೇನಾ ನೆಲೆಯ ಮೇಲೆ ಜೈಶ್ -ಇ -ಮೊಹಮದ್ ಉಗ್ರ ಸಂಘಟನೆ ದಾಳಿ ನಡೆಸಿದ 11 ದಿನಗಳ ನಂತರ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು. ಈ ದಾಳಿಯಲ್ಲಿ 18 ಮಂದಿ ಸಾನಿಕರು ಹುತಾತ್ಮರಾಗಿದ್ದರು.