ನವದೆಹಲಿ: ನ್ಯೂಸ್ ವೆಬ್ ಸೈಟ್ ವೊಂದು ನಡೆಸಿದ್ದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯಲ್ಲಿರುವ 'ಸಹಾಯಕ್' (ಆರ್ಡರ್ಲಿ) ಪದ್ಧತಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದ ಯೋಧ ರಾಯ್ ಮ್ಯಾಥ್ಯೂ ಅವರ ದೇಹ ಶವವಾಗಿ ಪತ್ತೆಯಾಗಿದೆ ಎಂದು ಶುಕ್ರವಾರ ತಿಳಿದುಬಂದಿದೆ.
ಮಹಾರಾಷ್ಟ್ರದ ದಿಯೋಲಾಲಿ ಕಂಟೋನ್ಮೆಂಟ್'ನ ಬ್ಯಾರೆಕ್ ನಲ್ಲಿ ಯೋಧನ ದೇಹ ಶವವಾಗಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ ವೆಬ್ ಸೈಟ್ ವೊಂದು ನಡೆಸಿದ್ದ ಕಾರ್ಯಾಚರಣೆಯೊಂದು ಫೆ.24 ರಂದು ಬಹಿರಂಗಗೊಂಡಿತ್ತು. ಸುಮಾರು 13 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಮ್ಯಾಥ್ಯೂ ಹಾಗೂ ಇತರ ಹಲವು ಮಂದಿ ಯೋಧರು, ಅಧಿಕಾರಿಗಳ ಮಕ್ಕಳನ್ನು ಶಾಲೆಗೆ ಕರೆದೊಯ್ಯುವುದು ಹಾಗೂ ನಾಯಿಗಳನ್ನು ವಿಹಾರಕ್ಕೆ ಕರೆಯ್ಯುವ ವಿಡಿಯೋ ಬಹಿರಂಗಗೊಂಡಿತ್ತು.
ಈ ರಹಸ್ಯ ಕಾರ್ಯಾಚರಣೆಯ ವಿಡಿಯೋ ಬಹಿರಂಗವಾದ ಬಳಿಕ ಬ್ರಿಟಿಷರ ಯುಗದ ಸಹಾಯಕ್ ಪದ್ಧತಿ ಇನ್ನು ಜಾರಿಯಲ್ಲಿರುವುದಕ್ಕೆ ತೀವ್ರ ಆಕ್ರೋಶ ಹಾಗೂ ವಿರೋಧಗಳು ವ್ಯಕ್ತವಾಗಿತ್ತು.
ಈ ಸ್ಟಿಂಗ್ ಆಪರೇಷನ್ ಬಹಿರಂಗವಾದ ಬಳಿಕ ರಾಯ್ ಅವರು ಕಾಣೆಯಾಗಿದ್ದರು. ಫೆ.25 ರಂದು ತಮ್ಮ ಪತ್ನಿಯೊಂದಿಗೆ ಮಾತನಾಡಿದ್ದ ಅವರು, ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಇದಾದ ಬಳಿಕ ರಾಯ್ ಅವರನ್ನು ಬಂಧಿಸಿಡಲಾಗಿದೆ ಎಂದು ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ರಾಯ್ ಅವರ ದೇಹ ಶವವಾಗಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಸರ್ಕಾರದ ವಿರುದ್ಧ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾವಿನ ಹಿಂದೆ ಸಂಚು ಅಡಗಿದೆ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics