ಕೇಂದ್ರ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು 
ದೇಶ

ಅಸಹಿಷ್ಣುತೆ ವಿವಾದ: 'ಭಾರತ ಎಂದಿಗೂ ಹೀರೋ' ಎಂದ ಕಿರಣ್ ರಿಜಿಜು

ಯಾರು ಏನೇ ಸಮರ್ಥಿಸಿಕೊಂಡರೂ, ದೇಶವನ್ನು ಯಾರೇ ಪ್ರತಿನಿಧಿಸಿದರೂ ಭಾರತ ಎಂದಿಗೂ ಹೀರೋ ಎಂದು ಕೇಂದ್ರ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಗುರುವಾರ ಹೇಳಿದ್ದಾರೆ...

ನವದೆಹಲಿ: ಯಾರು ಏನೇ ಸಮರ್ಥಿಸಿಕೊಂಡರೂ, ದೇಶವನ್ನು ಯಾರೇ ಪ್ರತಿನಿಧಿಸಿದರೂ ಭಾರತ ಎಂದಿಗೂ ಹೀರೋ ಎಂದು ಕೇಂದ್ರ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಗುರುವಾರ ಹೇಳಿದ್ದಾರೆ. 
ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್ಮೆಹರ್ ಕೌರ್ ಅವರ ಪ್ರಕರಣ ಸಂಬಂಧ ಎದ್ದಿರುವ ಅಸಹಿಷ್ಣುತೆ ವಿವಾದ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಯಾರು ಏನೇ ಸಮರ್ಥಿಸಿಕೊಂಡರೂ, ಕ್ರೀಡಾಪಟುಗಳು, ಯೋಧರು, ವಿಜ್ಞಾನಿಗಳು, ಶಿಕ್ಷಕರು, ರೈತರು, ವೈದ್ಯರು, ಕಾರ್ಮಿಕರು, ಇಂಜಿನಿಯರ್, ವ್ಯಾಪಾರಸ್ಥರೂ ಯಾರೇ ದೇಶವನ್ನು ಪ್ರತಿನಿಧಿಸಿದರೂ ಭಾರತ ಎಂದಿಗೂ ಹೀರೋ ಆಗಿರುತ್ತದೆ ಎಂದು ಹೇಳಿದ್ದಾರೆ. 
ದೆಹಲಿಯ ರಾಮ್ಜಾಸ್ ಕಾಲೇಜಿನಲ್ಲಿ ನಡೆದ ಘರ್ಷಣೆ ಸಂಬಂಧ ಎಬಿವಿಪಿ ವಿರುದ್ದ ಕಿಡಿಕಾರಿದ್ದ ಗುರ್​ಮೆಹರ್ ಕೌರ್ ಅವರು, ಎಬಿವಿಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲ ಪೋಸ್ಟ್ ಗಳನ್ನು ಹಾಕಿದ್ದರು. ನನ್ನ ತಂದೆ ಸಾವಿಗೆ ಪಾಕಿಸ್ತಾನ ಕಾರಣವಲ್ಲ, ಯುದ್ಧವೇ ಕಾರಣ ಎಂದು ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು, ಗುರ್ಮೆಹರ್ ಅವರ ಕುರಿತಂತೆ ಪರ ಹಾಗೂ ವಿರೋಧ ದನಿಗಳು ಆರಂಭಗೊಂಡಿತ್ತು. 
ಪ್ರಕರಣ ಸಂಬಂಧ ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ರಿಜಿಜು ಅವರು, ಗುರ್ಮೆಹರ್ ಕೌರ್ ಅವರು ಹುತಾತ್ಮ ಯೋಧನ ಪುತ್ರಿ. ಯೋಧ ಹುತಾತ್ಮನಾದಾಗ ಕೆಲವರು ಅವರ ಸಾವಿನ ಕುರಿತು ಸಂಭ್ರಮವನ್ನು ಆಚರಿಸಿದ್ದರು. ಅಂತಹ ಜನರಿಂದಲೇ ತಮ್ಮ ಮಗಳು ದಾರಿ ತಪ್ಪಿರುವುದಕ್ಕೆ ಹುತಾತ್ಮನಾಗಿರುವ ಯೋಧ ಕಣ್ಣೀರು ಹಾಕುತ್ತಿರುತ್ತಾರೆಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!