ನವದೆಹಲಿ: ಸೇನೆಯಲ್ಲಿ ಕೆಲ ಅಧಿಕಾರಿಗಳು ಸಹಾಯಕ ಪದ್ಧತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದು ಎಂದ ಸಿಂಧವ್ ಜೋಗಿದಾಸ್ ಆರೋಪಿಸಿದ್ದಾರೆ.
ಸಹಾಯಕ್ ಪದ್ಧತಿ ಕುರಿತಂತೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವ ಜೋಗಿದಾಸ್ ಅವರು, ರಜೆ ಮುಗಿಸಿ ಬರುವಾಗ ಎರಡು ದಿನ ತಡವಾದುದ್ದಕ್ಕಾಗಿ ತಮಗೆ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ರಾಷ್ಟ್ರದ ಘನತೆ ಎಲ್ಲಕ್ಕಿಂತಲೂ ಹೆಚ್ಚಿನದು ಎಂದು ಸೇನೆಗೆ ಬರುವ ಪ್ರತೀಯೊಬ್ಬ ಯೋಧನೂ ಭಾವಿಸುತ್ತಾರೆ, ಆದರೆ, ಕೆಲ ಅಧಿಕಾರಿಗಳು ಸಹಾಯಕರನ್ನು ಗುಲಾಮರಂತೆ ನೋಡುತ್ತಿದ್ದಾರೆ. ಇದರ ವಿರುದ್ಧ ದನಿಯೆತ್ತಿದವರನ್ನು ಶಿಕ್ಷಿಸಲಾಗುತ್ತದೆ. ಇದನ್ನು ಇನ್ನು ಎಷ್ಟು ದಿನಗಳ ಕಾಲ ಸಹಿಸಿಕೊಳ್ಳಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಯೋಧನ ಆರೋಪವನ್ನು ತಳ್ಳಿಹಾಕಿರುವ ಸೇನಾಧಿಕಾರಿಗಳು, ಆರೋಪಗಳು ಆಧಾರರಹಿತವಾದದ್ದು ಎಂದು ಹೇಳಿದ್ದಾರೆ.
ಸಹಾಯಕ್ ಪದ್ಧತಿ ವಿರುದ್ಧ ಈ ಹಿಂದೆ ಲಾನ್ಸ್ ನಾಯ್ಕ್ ರಾಯ್ ಮ್ಯಾಥ್ಯೂ ಎಂಬ ಯೋಧ ತಿರುಗಿ ಬಿದ್ದಿದ್ದರು. ವೆಬ್ ಸೈಟ್ ಸುದ್ದಿ ಮಾಧ್ಯಮವೊಂದು ನಡೆಸಿದ್ದ ಈ ಕಾರ್ಯಾಚರಣೆಯಲ್ಲಿ ಯೋಧ ಮ್ಯಾಥ್ಯೂ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ಕುಟುಕು ಕಾರ್ಯಾಚರಣೆ ಬಹಿರಂಗಗೊಂಡ ಕೇಲವೇ ದಿನಗಳಲ್ಲಿ ಮ್ಯಾಥ್ಯೂ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಇದೀಗ ಜೋಗಿದಾಸ್ ಅವರು ಸಹಾಯಕ್ ಪದ್ಧತಿ ವಿರುದ್ದ ದನಿ ಎತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics