ಲಕ್ನೋ: ಸಾಮೂಹಿಕ ಅತ್ಯಾಚಾರ ಪ್ರಕರಣ ಆರೋಪ ಪ್ರಕರಣದಲ್ಲಿ ಕಳೆದ 15 ದಿನಗಳಿಂದ ತಲೆ ಮರೆಸಿಕೊಂಡಿದ್ದ ಸಮಾಜವಾದಿ ಪಕ್ಷದ ಮುಖಂಡ ಗಾಯತ್ರಿ ಪ್ರಜಾಪತಿಯನ್ನು ಪೊಲೀಸರು ಲಕ್ನೋದಲ್ಲಿ ಬಂಧಿಸಿದ್ದಾರೆ.
ಗ್ಯಾಂಗ್ ರೇಪ್ ಆರೋಪ ಸಂಬಂಧ ಅಖಿಲೇಶ್ ಯಾದವ್ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಜಾಪತಿ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಅದರಂತೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದರು, ನಂತರ ಬಂಧನದ ಭೀತಿಯಿಂದ ಫೆಬ್ರವರಿ 27 ರಿಂದ ಗಾಯತ್ರಿ ಪ್ರಜಾಪತಿ ತಲೆ ಮರೆಸಿಕೊಂಡಿದ್ದರು.
ಗಾಯತ್ರಿ ಪ್ರಜಾಪತಿ ಬಂಧನವನ್ನು ಲಕ್ನೋ ಎಡಿಜಿಪಿ ದಲ್ಜೀತ್ ಚೌದರಿ ಸ್ಪಷ್ಟ ಪಡಿಸಿದ್ದಾರೆ. ಗ್ಯಾಂಗ್ ರೇಪ್ ಆರೋಪ ಸಂಬಂಧ ನಿನ್ನೆ ಗಾಯತ್ರಿ ಪ್ರಜಾಪತಿಯ ಮೂವರು ಸಹಚರರನ್ನು ಬಂಧಿಸಲಾಗಿತ್ತು.