ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ
ಮೌಂಟ್ ಅಬು (ರಾಜಸ್ತಾನ): ನಾನು ಹುಟ್ಟಿದ್ದು ಕರಾಚಿಯಲ್ಲಿ ಆದರೆ, ಶಿಕ್ಷಣ ಪಡೆದಿದ್ದು, ಶಿಸ್ತು ಕಲಿತಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರು ಹೇಳಿದ್ದಾರೆ.
ಬ್ರಹ್ಮ ಕುಮಾರಿ ಸಂಸ್ಥೆಯ 80ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ನಾನು ಕರಾಚಿಯಲ್ಲಿಯೇ ಹುಟ್ಟಿದ್ದೆ. ಆದರೆ, ಶಿಸ್ತು ಮತ್ತು ಶಿಕ್ಷಣವನ್ನು ಪಡೆದುಕೊಂಡಿದ್ದು ಮಾತ್ರ ಆರ್'ಎಸ್ಎಸ್ ನಿಂದ. ಕೆಟ್ಟದ್ದನ್ನು ಎಂದಿಗೂ ಪ್ರಚಾರ ಮಾಡಬಾರೆದೆಂಬುದನ್ನು ಆರ್'ಎಸ್ಎಸ್'ನಿಂದ ಕಲಿತೆ. ದೇಶದ ಕುರಿತ ಭಕ್ತಿ ಹಾಗೂ ಸಮರ್ಪಣೆಯನ್ನು ಆರ್'ಎಸ್ಎಸ್ ನಿಂದ ಕಲಿತೆ ಎಂದು ಹೇಳಿದ್ದಾರೆ.
ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಗಣ್ಯರು ಇಂದು ಬ್ರಹ್ಮಕುಮಾರಿಯ 80ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಅಗಮಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅಸ್ಸಾಂ, ಗುಜರಾತ್ ರಾಜ್ಯಗಳ ರಾಜ್ಯಪಾಲರು, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಇನ್ನಿತರೆ ಗಣ್ಯಾತಿಗಣ್ಯರು ಹಾಜರಿದ್ದರು.