ನವದೆಹಲಿ: ಲಂಚ ಆರೋಪಕ್ಕೆ ಸಂಬಂಧಿಸಿದಂತೆ ಮುಂಬಯಿ ಆದಾಯ ತೆರಿಗೆ ಇಲಾಖೆ ಆಯುಕ್ತ ಸೇರಿದಂತೆ ಒಟ್ಟು ಐದು ಮಂದಿಯನ್ನು ಸಿಬಿಐ ಬಂಧಿಸಿದೆ.
ಕಾರ್ಪೋರೇಟ್ ಕಂಪನಿಯ ಗ್ರೂಪ್ ಒಂದರ ಫೇವರ್ ಮಾಡಲು 19 ಲಕ್ಷ ಲಂಚ ಪಡೆದ ಆರೋಪದ ಮೇಲೆ ಕಮಿಷನರ್ ಬಿ.ಬಿ ರಾಜೇಂದ್ರ ಪ್ರಸಾದ್ ಅವರನ್ನು ವಿಶಾಖಪಟ್ಟಣಂ ನಲ್ಲಿ ಬಂಧಿಸಲಾಗಿದೆ.
ಲಂಚ ಪ್ರಕರಣ ಆರೋಪಕ್ಕೆ ಸಂಬಂಧಿಸಿದಂತೆ ಇನ್ನುಳಿದ ನಾಲ್ಕು ಮಂದಿಯನ್ನು ಮುಂಬಯಿಯಲ್ಲಿ ಬಂಧಿಸಿರುವ ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.
19 ಲಕ್ಷ ರುಪಾಯಿ ಹಣವನ್ನು ಕಮಿಷನರ್ ಲಂಚವಾಗಿ ಸ್ವೀಕರಿಸಿದ್ದರು. ಅವರ ಮನೆಯಲ್ಲಿ ಪರಿಶೀಲಿಸಿದಾಗ 1.5 ಕೋಟಿ ರು ಹಣವನ್ನು ಸೀಜ್ ಮಾಡಲಾಗಿದೆ.