ದೇಶ

ಈಗ ನಿಮ್ಮ ಮನೆ ಬಾಗಿಲಿಗೆ ಬರಲಿದೆ ರೈಲ್ವೆ ಟಿಕೆಟ್; ಪೇ ಆನ್ ಡೆಲಿವರಿ ಸಹ ಉಂಟು!

Lingaraj Badiger
ನವದೆಹಲಿ: ಭಾರತೀಯ ರೈಲ್ವೆ ಈಗ ಮತ್ತಷ್ಟು ಪ್ರಾಯಾಣಿಕ ಸ್ನೇಹಿಯಾಗಿದ್ದು, ಇನ್ನುಮುಂದೆ ನೀವು ಟಿಕೆಟ್ ಗಾಗಿ ರೈಲ್ವೆ ನಿಲ್ದಾಣಕ್ಕೆ ಹೋಗಬೇಕಾಗಿಲ್ಲ. ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದರೆ ಸಾಕು ಅತಿ ಕನಿಷ್ಠ ಚಾರ್ಚ್ ನೊಂದಿಗೆ ಟಿಕೆಟ್ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಟಿಕೆಟ್ ನಿಮ್ಮ ಕೈ ಸೇರಿದ ನಂತರವೇ ಹಣ ಪಾವತಿಸುವ ಆಯ್ಕೆಯನ್ನು ನೀಡಲಾಗಿದೆ.
ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆ ಪೇ ಆನ್ ಡೆಲಿವೆರಿ(ಟಿಕೆಟ್ ತಲುಪಿದಾಗ ಹಣ ಪಾವತಿಸುವುದು)ಯನ್ನು ಪರಿಚಯಿಸುತ್ತಿದ್ದು, ಐಆರ್ ಸಿಟಿಸಿ, ರೈಲ್ವೆ ಪಿಎಸ್ ಯು ಗ್ರಾಹಕರು ಸೇರಿದಂತೆ ಎಲ್ಲಾ ವರ್ಗದ ಪ್ರಯಾಣಿಕರು ಟಿಕೆಟ್ ಬುಕ್ ಮಾಡಬಹುದಾಗಿದೆ.
ಗ್ರಾಹಕರು ಟಿಕೆಟ್ ದರವನ್ನು ಡೆಲಿವೆರಿ ಸಂದರ್ಭದಲ್ಲಿ ನಗದು ಸೇರಿದಂತೆ ಯಾವುದೇ ಮಾದರಿಯಲ್ಲಿ ಪಾವತಿಸಲು ಅವಕಾಶ ನೀಡಲಾಗಿದೆ.
SCROLL FOR NEXT