ಜೈಪುರ: ಅತ್ಯಾಚಾರ ತಡೆಯಲು ಪ್ರತೀ ಮನೆಗೂ ಪೊಲೀಸರನ್ನು ನಿಯೋಜಿಸಿ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ರಾಜಸ್ತಾನ ರಾಜ್ಯದ ಆರೋಗ್ಯ ಸಚಿವ ಕಾಳೀಚರಣ ಸರಾಫ್ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಇತ್ತೀಚೆಗಷ್ಟೇ 4 ವರ್ಷದ ಬಾಲಕಿಯೊಬ್ಬಳ ಮೇಲೆ ಮನೆಕೆಲಸದಾತ ಅತ್ಯಾಚಾರ ಮಾಡಿದ ಪ್ರಕರಣವೊಂದು ರಾಜಸ್ತಾನದಲ್ಲಿ ನಡೆದಿತ್ತು.
ಪ್ರಕರಣ ಕುರಿತಂತೆ ನಿನ್ನೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಸರಾಫ್ ಅವರು, ಯಾರದ್ದೋ ಮನೆಯೊಳಗೆ ಅತ್ಯಾಚಾರ ಸಂಭವಿಸಿದರೆ ಪೊಲೀಸರು ಏನು ಮಾಡಬೇಕು? ಪ್ರತೀ ಮನೆಗೂ ಪೊಲೀಸರನ್ನು ನಿಯೋಜಿಸಲು ಸಾಧ್ಯವೇ?...ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅತ್ಯಾಚಾರ ಪ್ರಕರಣಗಳೇ ನಡೆದಿಲ್ಲವೇ...? ಅತ್ಯಾಚಾರ ತಡೆಯುವ ಸಲುವಾಗಿ ಪ್ರತೀಯೊಬ್ಬರ ರಕ್ಷಣೆಗೂ ಪೊಲೀಸರನ್ನು ನಿಯೋಜಿಸಲು ಸಾಧ್ಯವಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದಾರೆ.