ದೇಶ

ಉತ್ತರ ಪ್ರದೇಶ: ಪ್ರತಿ ಶನಿವಾರ ವಿದ್ಯಾರ್ಥಿಗಳಿಗೆ ನೋ ಬ್ಯಾಗ್ ಡೇ

Srinivas Rao BV
ಲಖನೌ: ವಿದ್ಯಾರ್ಥಿಗಳು ಎದುರಿಸುವ ಒತ್ತಡವನ್ನು ಕಡಿಮೆ ಮಾಡಲು ಉತ್ತರ ಪ್ರದೇಶ ಸರ್ಕಾರ ಕ್ರಮ ಕೈಗೊಂಡಿದ್ದು, ಪ್ರತಿ ಶನಿವಾರಗಳಂದು ವಿದ್ಯಾರ್ಥಿಗಳು ಬ್ಯಾಗ್ ತರದೇ ಶಾಲೆಗೆ ಬರುವ ಕಾರ್ಯಕ್ರಮವನ್ನು ರೂಪಿಸಿದೆ. 
ಶನಿವಾರಗಳ ತರಗತಿಗಳನ್ನು ಪಠ್ಯೇತರ ಚಟುವಟಿಕೆಗೆ ಮೀಸಲಿಡುವ ಮೂಲಕ ವಿದ್ಯಾರ್ಥಿಗಳು- ಶಿಕ್ಷಕರ ನಡುವೆ ಉತ್ತಮ, ಸಕಾರಾತ್ಮಕ ಬಾಂಧವ್ಯ ಮೂಡಿಸುವ ಉದ್ದೇಶ ಉತ್ತರ ಪ್ರದೇಶ ಸರ್ಕಾರದ್ದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. 
ಉತ್ತರ ಪ್ರದೇಶ ಉಪಮುಖ್ಯಮಂತ್ರಿ, ಶಿಕ್ಷಣ ಸಚಿವ ದಿನೇಶ್ ಶರ್ಮಾ ಆದೇಶ ಹೊರಡಿಸಿದ್ದು, ಎಲ್ಲಾ ಸರ್ಕಾರಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ನೋ ಬ್ಯಾಗ್ ಡೇ ಆಗಿರಲಿದೆ. ಮೇ.12 ರಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆ ನಡೆಸಿದ್ದು, ಶಾಲಾ ಶಿಕ್ಷಕರನ್ನು ಹಾಗೂ ಸಿಬ್ಬಂದಿಗಳನ್ನು ಜನಗಣತಿ(ಸೆನ್ಸಸ್) ಹಾಗೂ ಚುನಾವಣಾ ಕೆಲಸಗಳಿಗೆ ಕಳಿಸಬಾರದು ಎಂಬ ಆದೇಶವನ್ನೂ ಹೊರಡಿಸಲಾಗಿದೆ. 
SCROLL FOR NEXT