ಚೆನ್ನೈ: ಮೇ.16 ರಂದು ಬೆಳಿಗ್ಗೆ ಕೇಂದ್ರೀಯ ತನಿಖಾ ದಳ(ಸಿಬಿಐ) ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿಗೆ ಶಾಕ್ ನೀಡಿದ್ದು, ಚೆನ್ನೈ ನಲ್ಲಿರುವ ಕಾರ್ತಿ ಚಿದಂಬರಂ ಮನೆ ಮೇಲೆ ದಾಳಿ ನಡೆಸಿದೆ.
ಸುಮಾರು 45 ಕೋಟಿ ರೂಗಳಷ್ಟು ಮೊತ್ತಕ್ಕೆ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ(ಎಫ್ಇಎಂಎ) ಯನ್ನು ಉಲ್ಲಂಘನೆ ಹಾಗೂ ಏರ್ ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪ ಎದುರಿಸುತ್ತಿರುವ ಕಾರ್ತಿ ಚಿದಂಬರಂಗೆ ಕಳೆದ ತಿಂಗಳು ಜಾರಿ ನಿರ್ದೇಶನಾಲಯ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.
ಅಷ್ಟೇ ಅಲ್ಲದೇ ಕಾರ್ತಿ ಚಿದಂಬರಂ ನಿರ್ವಹಣೆ ಮಾಡುತ್ತಿದ್ದಾರೆ ಎನ್ನಲಾದ ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ಪ್ರೈ ಲಿಮಿಟೆಡ್ ನ ನಿರ್ದೇಶಕರಿಗೂ ಸಹ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಏರ್ ಸೆಲ್-ಮ್ಯಾಕ್ಸಿಸ್ ಡೀಲ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯಾದ ಪ್ರಕರಣ ಬೆಳಕಿಗೆ ಬಂದಾಗ ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ಪ್ರೈ ಲಿಮಿಟೆಡ್ ನ ಅಕ್ರಮಗಳೂ ಸಹ ಬೆಳಕಿಗೆ ಬಂದಿತ್ತು.
ಇದೇ ಮಾದರಿಯಲ್ಲಿ ಚೆನ್ನೈ ಮೂಲದ ವಾಸನ್ ಹೆಲ್ತ್ ಕೇರ್ ಪ್ರೈ.ಲಿ ವಿರುದ್ಧ 2,262 ಕೋಟಿ ರೂಪಾಯಿಯಷ್ಟು ಮೊತ್ತಕ್ಕೆ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ. ತಮ್ಮ ಪುತ್ರನ ವಿರುದ್ಧ ಕೇಳಿಬಂದಿದ್ದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದ ಪಿ.ಚಿದಂಬರಂ, ಇಡಿ ತಮ್ಮ ಪುತ್ರನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ. ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ಪ್ರೈ ಲಿಮಿಟೆಡ್ ಹಾಗೂ ವಾಸನ್ ಹೆಲ್ತ್ ಕೇರ್ ಗೆ ತಮ್ಮ ಪುತ್ರ ಕಾರ್ತಿಗೂ ಸಂಬಂಧವಿಲ್ಲ ಆ ಸಂಸ್ಥೆಗಳಿಗೆ ಅವರು ನಿರ್ದೇಶಕರೂ ಅಲ್ಲ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics