ದೇಶ

ನಾಸಾ ಕಂಡು ಹಿಡಿದಿರುವ ಹೊಸ ಜೀವಿಗೆ ಅಬ್ದುಲ್ ಕಲಾಂ ಹೆಸರು

Vishwanath S
ಲಾಸ್ ಏಂಜಲೀಸ್: ನಾಸಾ ವಿಜ್ಞಾನಿಗಳು ತಾವು ಕಂಡು ಹಿಡಿರುವ ಹೊಸ ಜೀವಿಗೆ ಮಿಸೈಲ್ ಮ್ಯಾನ್ ಖ್ಯಾತಿಯ ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿಡುವ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ. 
ನಾಸಾ ವಿಜ್ಞಾನಿಗಳು ಬ್ಯಾಕ್ಟಿರಿಯಾ ವಿಧದ ಸೂಕ್ಷ್ಮಾಣು ಜೀವಿಗೆ ಸೊಲಿಬಾಸಿಲಸ್ ಕಲಾಂಜೀ ಎಂದು ನಾಮಕರಣ ಮಾಡಿದ್ದಾರೆ. ಇನ್ನು ಈ ಜೀವಿ ಬಾಹ್ಯಾಕಾಶದಲ್ಲಿ ಮಾತ್ರ ಕಂಡುಬರುತ್ತದೆ. 
ಅಬ್ದುಲ್ ಕಲಾಂ ಅವರು 1963ರಲ್ಲಿ ನಾಸಾದಲ್ಲಿ ತರಬೇತಿ ಪಡೆದಿದ್ದರು. ಬ್ಯಾಕ್ಟಿರಿಯಾಗೆ ಸೊಲಿಬಾಸಿಲಸ್ ಕಲಾಂ ಎಂದು ಹೆಸರಿಡಲಾಗಿದೆ ಎಂದು ಜೆಪಿಎಲ್ ನ ಹಿರಿಯ ಸಂಶೋಧಕ ಡಾ. ಕಸ್ತೂರಿ ವೆಂಕಟೇಶ್ವರನ್ ಅವರು ತಿಳಿಸಿದ್ದಾರೆ. 
SCROLL FOR NEXT