ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ನ ಗಡಿ ನಿಯಂತ್ರಣ ರೇಖೆ(ಎಲ್ ಒಸಿ) ಬಳಿ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಮ್(ಬಿಎಟಿ) ನಡೆಸಿದ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ ಮತ್ತು ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ ಎಂದು ಗುರುವಾರ ಸೇನೆ ತಿಳಿಸಿದೆ.
ಇಂದು ಉರಿ ಸೆಕ್ಟರ್ ನಲ್ಲಿ ಎಲ್ ಒಸಿ ಬಳಿ ಗಸ್ತಿನಲ್ಲಿದ್ದ ನಮ್ಮ ಸೇನೆ ಪಡೆಗಳ ಮೇಲೆ ಬಿಎಟಿ ದಾಳಿ ನಡೆಸಿದ್ದು, ಆ ದಾಳಿಯನ್ನು ನಮ್ಮ ಸೇನೆ ವಿಫಲಗೊಳಿಸಿದೆ ಮತ್ತು ಇಬ್ಬರು ಬಿಎಟಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಹತ್ಯೆಯಾದ ಇಬ್ಬರು ಉಗ್ರರ ಮೃತದೇಹಗಳು ವಿವಾದಿತ ಪ್ರದೇಶದಲ್ಲಿವೆ.