ದೇಶ

ಗೆಳತಿಯನ್ನು ಮದುವೆಯಾಗಲು ಹಣಕ್ಕಾಗಿ ಎಟಿಎಂನಲ್ಲಿ ಕದಿಯಲು ಆನ್ ಲೈನ್ ಟುಟೋರಿಯಲ್ ನೆರವು ಪಡೆದ!

Sumana Upadhyaya
ನವದೆಹಲಿ: ಎಟಿಎಂನಿಂದ ಹಣ ಕದಿಯಲು ಯತ್ನಿಸುತ್ತಿದ್ದ 19 ವರ್ಷದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮನೀಶ್ ಎಂದು ಗುರುತಿಸಲಾಗಿದ್ದು, ಈತ ಅಂತರ್ಜಾಲದಲ್ಲಿಎಟಿಎಂನಿಂದ  ಹಣ ಕದಿಯುವ ಬಗ್ಗೆ ತರಬೇತಿ ಪಡೆದು ಬಾಲಾಪರಾಧಿಗಳು ಸೇರಿದಂತೆ ನಾಲ್ವರ ತಂಡವನ್ನು ರಚಿಸಿದ್ದನು. ಈ ಮೂಲಕ ಹಣ ಕದ್ದು ತನಗೆ 7 ವರ್ಷದಿಂದ ಆತ್ಮೀಯಳಾಗಿದ್ದ ಗೆಳತಿಯನ್ನು ಮದುವೆಯಾಗುವ ಯೋಚನೆ ಮನೀಶ್ ನದ್ದಾಗಿತ್ತು. 
ಅಂದು ಮಾತ್ರ ಮನೀಶ್ ನ ಪ್ರಯತ್ನ ಫಲಿಸಲಿಲ್ಲ. ಸ್ಥಳೀಯ ನಿವಾಸಿಗಳು ಎಟಿಎಂಗೆ ಹಣ ವಿತ್ ಡ್ರಾ ಮಾಡಲು ಬಂದಿದ್ದ ಸಂದರ್ಭದಲ್ಲಿ ಮನೀಶ್ ಮತ್ತು ಆತನ ಸ್ನೇಹಿತರು ಎಟಿಎಂ ಯಂತ್ರ ಮುರಿದು ಅದನ್ನು ತೆರೆಯಲು ಪ್ರಯತ್ನಿಸಿದ್ದು ಗೊತ್ತಾಗಿ ಅಟ್ಟಾಡಿಸಿಕೊಂಡು ಹೋಗಿ ಹಿಡಿದಿದ್ದಾರೆ. ಮನೀಶ್ ಗುಂಪಿನವರಿಗೆ ಸಹಾಯ ಮಾಡುವ ನೆಪದಲ್ಲಿ ಬಂದು ಸ್ಥಳೀಯರು ಎಲ್ಲಾ ನಾಲ್ವರು ಆರೋಪಿಗಳನ್ನು ಹಿಡಿದಿದ್ದಾರೆ. ಆರೋಪಿಗಳನ್ನು ಮನೀಶ್, ಆತನ ಸ್ನೇಹಿತರಾದ ವಿಷ್ಣು, ಅಂಕಿತ್ ಅಲಿಯಾಸ್ ಗಬ್ಬರ್ ಮತ್ತು ಮತ್ತೊಬ್ಬ ಪದವಿ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. 
ನಸುಕಿನ ಜಾವ 2ರಿಂದ 3 ಗಂಟೆ ವೇಳೆಗೆ ಸ್ಥಳೀಯ ನಿವಾಸಿ ಅನುರಾಗ್ ಶರ್ಮ ಮತ್ತು ಆತನ ಸ್ನೇಹಿತ ಕಚೇರಿಯಿಂದ ಮನೆಗೆ ಮರಳುತ್ತಿದ್ದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಅವರಿಬ್ಬರು ಕೆನರಾ ಬ್ಯಾಂಕ್ ಎಟಿಎಂಗೆ ಹಣ ವಿತ್ ಡ್ರಾ ಮಾಡಲು ಆಗಮಿಸಿದ್ದಾಗ ಯಾರೊ ಎಟಿಎಂ ಯಂತ್ರವನ್ನು ಮುರಿದು ಹಣ ಕದಿಯಲು ಯತ್ನಿಸಿದ್ದು ಸಂದೇಹ ಬಂತು. ಕೊನೆಗೆ ಸಂಶಯ ನಿಜವಾಯಿತು.
SCROLL FOR NEXT