ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಬೆಲೆ ಏರಿಕೆ ನಿಯಂತ್ರಿಸಲು ಆಗದಿದ್ದರೆ, ಅಧಿಕಾರದ ಸಿಂಹಾಸನ ಖಾಲಿ ಮಾಡಿ: ಪ್ರಧಾನಿ ಮೋದಿಗೆ ರಾಹುಲ್

ಬೆಲೆ ಏರಿಕೆ, ಹಣ ದುಬ್ಬರ ಹಾಗೂ ಉದ್ಯೋಗ ಸೃಷ್ಟಿಸಲು ಸಾಧ್ಯವಾಗದೇ ಹೋದರೆ, ಅಧಿಕಾರದ ಸಿಂಹಾಸನವನ್ನು ಖಾಲಿ ಮಾಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಭಾನುವಾರ ಹೇಳಿದ್ದಾರೆ...

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Manjula VN
Updated On : 5 Nov 2017, 1:28 am

ನವದೆಹಲಿ: ಬೆಲೆ ಏರಿಕೆ, ಹಣ ದುಬ್ಬರ ಹಾಗೂ ಉದ್ಯೋಗ ಸೃಷ್ಟಿಸಲು ಸಾಧ್ಯವಾಗದೇ ಹೋದರೆ, ಅಧಿಕಾರದ ಸಿಂಹಾಸನವನ್ನು ಖಾಲಿ ಮಾಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಭಾನುವಾರ ಹೇಳಿದ್ದಾರೆ. 

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಈ ಹಿಂದೆ ಬೆಲೆ ಏರಿಕೆ ಘೋಷಣೆ ಮಾಡಿತ್ತು. ಇದೇ ತಿಂಗಳು 1ರಿಂದ ಅಡುಗೆ ಅನಿಲ ದರದಲ್ಲಿ ಏರಿಕೆಯಾಗಿದೆ. ಸಬ್ಸಿಡಿಯ 14.2 ಕೆ.ಜಿಯ ಪ್ರತಿ ಸಿಲಿಂಡರ್ ಗೆ ರೂ.4.50 ಹಾಗೂ ಸಬ್ಸಿಡಿ ರಹಿತ ಪ್ರತಿ ಸಿಲಿಂಡರ್ ಬೆಲೆಯಲ್ಲಿ ರೂ.93 ಏರಿಕೆಯಾಗಿದೆ. ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ದ ರಾಹುಲ್ ಗಾಂಧಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ. 

Advertisement

Advertisement

ಗ್ಯಾಸ್ ಬೆಲೆ ಏರಿಕೆ, ಪಡಿತರ ಬೆಳೆ ಏರಿಕೆ ಎಂಬ ಟೊಳ್ಳು ಭಾಷಣಗಳನ್ನು ನಿಲ್ಲಿಸಿ. ಜನರಿಗೆ ಉದ್ಯೋಗ ನೀಡಿ, ಬೆಲೆ ಏರಿಕೆ ನಿಯಂತ್ರಿಸಿ. ಇಲ್ಲದೇ ಹೋದರೆ, ಅಧಿಕಾರದ ಸಿಂಹಾಸನವನ್ನು ಖಾಲಿ ಮಾಡಿ ಎಂದು ಹೇಳಿದ್ದಾರೆ. 

ಅಲ್ಲದೆ, ಇದರೊಂದಿಗೆ ಗ್ಯಾಸ್ ಬೆಲೆ ಏರಿಕೆ ಕುರಿತ ಅಡುಗೆ ಅನಿಲ ಸಿಂಡರ್ ದರ 16 ತಿಂಗಳಲ್ಲಿ 19ನೇ ಬಾರಿ ಏರಿಕೆಯಾಗಿದೆ ಎಂದಿರುವ ತಲೆಬರಹದ ಮಾಧ್ಯಮದ ವರದಿಯನ್ನು ರಾಹುಲ್ ಹಂಚಿಕೊಂಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement