ಬಾಲಿವುಡ್ ನಟ ಅಮಿತಾಭ್ ಬಚ್ಚನ್
ಮುಂಬೈ: ಪ್ಯಾರಡೈಸ್ ಪೇಪರ್ಸ್ ದಾಖಲೆಗಳಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಹೆಸರು ಕೇಳಿ ಬಂದಿದ್ದು, ಈ ಹಿನ್ನಲೆಯಲ್ಲಿ ಬ್ಲಾಗ್ ಬರೆದಿರುವ ಅಮಿತಾಭ್ ಬಚ್ಚನ್ ಅವರು ಈ ವಯಸ್ಸಿನಲ್ಲಿ ನೆಮ್ಮದಿ ಹಾಗೂ ಸ್ವತಂತ್ರದಿಂದ ಇರಲು ಬಯಸುತ್ತೇನೆಂದು ಹೇಳಿಕೊಂಡಿದ್ದಾರೆ.
ಆಸ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದಕ್ಕೆ ಮುಂಬೈ ಮಹಾನಗರ ಪಾಲಿಕೆ ನೀಡಿರುವ ನೋಟಿಸ್ ಗೆ ಉತ್ತರವಾಗಿ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿರುವ ಅಮಿತಾಭ್ ಬಚ್ಚನ್ ಅವರು, ನಾನು ಯಾವತ್ತೂ ವ್ಯವಸ್ಥೆಯೊಂದಿಗೆ ಸಹರಿಸುತ್ತಾ ಬಂದಿದ್ದೇನೆ. ಜೀವನದ ಅಂತ್ಯಕಾಲದಲ್ಲಿ ನೆಮ್ಮದಿ ಹಾಗೂ ಸ್ವತಂತ್ರದಿಂದ ಇರಲು ಬಯಸುತ್ತೇನೆ. ನಾಳೆ ಇನ್ನಷ್ಟು ಆರೋಪಗಳು ಕೇಳಿ ಬರಬಹುದು ಸಹಕರಿಸುವ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಹೇಳಿಕೊಂಡಿದ್ದಾರೆ.
ಅಮಿತಾಭ್ ಬಚ್ಚನ್ ಅವರು ತಮ್ಮ ಬ್ಲಾಗ್ ನಲ್ಲಿ ಈ ರೀತಿ ಬರದ ಮರುದಿನವೇ 'ಇಂಡಿಯನ್ ಎಕ್ಸ್'ಪ್ರೆಸ್' ಪತ್ರಿಕೆ ಪ್ಯಾರಡೈಸ್ ಪೇಪರ್ಸ್ ಹೆಸರಿನಲ್ಲಿ ಸೋರಿಕೆಯಾದ ದಾಖಲೆಗಳಲ್ಲಿ ಅಮಿತಾಭ್ ಬಚ್ಚನ್ ಅವರ ಹೆಸರು ಕೂಡ ಉಲ್ಲೇಖವಾಗಿದೆ ಎಂದು ತಿಳಿಸಿತ್ತು.
ನನ್ನ ಜೀವನದ ಅಂತಿಮ ಕಾಲದಲ್ಲಿ ನಾನು ಶಾಂತಿ ಹಾಗೂ ಸ್ವಾತಂತ್ರ್ಯವನ್ನು ಬಯಸಿದ್ದೇನೆ. ನನ್ನ ಜೀವನದಲ್ಲಿ ಇನ್ನುಳಿದ ಕೆಲವು ವರ್ಷಗಳನ್ನು ನನ್ನೊಂದಿಗೆ ಕಳೆಯಲು ಬಯಸುತ್ತೇನೆ. ನನಗೀಗ ವಿಶೇಷಣಗಳು ಬೇಕಾಗಿಲ್ಲ. ಶೀರ್ಷಿಕೆಗಳು ಬೇಕಾಗಿಲ್ಲ. ನಾನು ಅವುಗಳಿಗೆ ಅರ್ಹನಾಗಿಲ್ಲ ಎಂದು ಬರೆದುಕೊಂಡಿದ್ದಾರೆ.
ಇದರೊಂದಿಗೆ ಪನಾಮಾ ಪೇಪರ್ಸ್ ಹಗರಣದ ಬಗ್ಗೆಯೂ ಪ್ರಸ್ತಾಪ ಮಾಡಿರುವ ಅವರು, ಇತ್ತೀಚಿನ ತಿಂಗಳಿನಲ್ಲಿ ಪನಾಮಾ ಪೇಪರ್ಸ್ ಹಗರಣದಲ್ಲಿ ನನ್ನ ಹೆಸರು ಕೇಳಿಬಂದಿದೆ. ಈ ಬಗ್ಗೆ ನನ್ನು ಪ್ರತಿಕ್ರಿಯೆಯನ್ನೂ ಕೇಳಲಾಯಿತು. ನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ನನ್ನ ಮೇಲಿನ ಆರೋಪಗಳು ಸುಳ್ಳು ಎಂದು ಪ್ರತಿಕ್ರಿಯೆ ನೀಡಿದ್ದೆ. ಆದರೆ, ಪ್ರಶ್ನೆಗಳು ಮುಂದುವರೆದವು.
ಬೋಪೋರ್ಸ್ ಹಗರಣದಲ್ಲಿಯೂ ನನ್ನ ಮತ್ತು ನನ್ನ ಕುಟುಂಬದ ಹೆಸರು ಕೇಳಿ ಬಂದವು. ವರ್ಷಾನುಗಟ್ಟಲೆ ವಿಚಾರಣೆಗಳು ನಡೆದವು. ನಮ್ಮನ್ನು ದ್ರೋಹಿಗಳೆಂದು ಘೋಷಿಸಲಾಯಿತು. ಇದರ ವಿರುದ್ಧ ಬ್ರಿಟನ್ ನ್ಯಾಯಾಲಯದಲ್ಲಿ ಹೋರಾಟಬೇಕಾಯಿತು. ನಾನು ತೊಂದರೆ ಅನುಭವಿಸುತ್ತಿರಬೇಕಾದರೆ ನನ್ನ ವಿರುದ್ಧ ಆರೋಪ ಮಾಡಿದವರು ವಿಚಾರಣೆಯನ್ನೇ ಎದುರಿಸಲಿಲ್ಲ ಎಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos