ದೇಶ

ಪ್ರಯಾಣಿಕನಿಗೆ ಏರ್ ಇಂಡಿಗೋ ಸಿಬ್ಬಂದಿಗಳಿಂದ ಥಳಿತ: ವಿಡಿಯೋ ಮಾಡಿದ್ದ ನೌಕರನ ಕೆಲಸಕ್ಕೆ ಕುತ್ತು!

Srinivas Rao BV
ನವದೆಹಲಿ: ಏರ್ ಇಂಡಿಗೋ ವಿಮಾನ ಸಂಸ್ಥೆಯ ಸಿಬ್ಬಂದಿಗಳು ಪ್ರಯಾಣಿಕನೋರ್ವನನ್ನು ಎಳೆದು ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ರೆಕಾರ್ಡ್ ಮಾಡಿದ್ದ  ಏರ್ ಇಂಡಿಗೋ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿರುವ ಸಂಸ್ಥೆ ಆತನನ್ನು ಕೆಲಸದಿಂದ ಅಮಾನತುಗೊಳಿಸಿದೆ. 
ಅ.15 ರಂದು ಚೆನ್ನೈ ನಿಂದ ದೆಹಲಿಗೆ ಬಂದಿಳಿದಿದ್ದ 6E 487 ವಿಮಾನದಲ್ಲಿ ಘತನೆ ನಡೆದಿದೆ. ಪ್ರಯಾಣಿಕ ರಾಜೀವ್ ಕಟಿಯಾಲ್ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಗ್ರೌಂಡ್ ಸ್ಟಾಫ್ ನೊಂದಿಗೆ ವಾಗ್ವಾದ ನಡೆಸಿದ್ದಾರೆ, ವಾಗ್ವಾದ ವಿಕೋಪಕ್ಕೆ ತಿರುಗಿ ಸಿಬ್ಬಂದಿಗಳು ಪ್ರಯಾಣಿಕನನ್ನು ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬೆನ್ನಲ್ಲೇ ವಿಮಾನಯಾನ ಸಂಸ್ಥೆಯ ಅಧ್ಯಕ್ಷ ಆದಿತ್ಯ ಘೋಷ್ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಅಹಿತಕರ ಘಟನೆಗೆ ಕ್ಷಮೆ ಕೋರುವುದಾಗಿ ತಿಳಿಸಿದ್ದಾರೆ. 
ಏರ್ ಇಂಡಿಗೋ ವಿಮಾನದಲ್ಲಿ ಅಹಿತಕರ ಘಟನೆ ನಡೆದಿರುವುದನ್ನು ನಾವು ಒಪ್ಪುತ್ತೇವೆ. ಇದಕ್ಕಾಗಿ ವೈಯಕ್ತಿಕವಾಗಿ ನಾನು ಕ್ಷಮೆ ಕೋರುತ್ತೇನೆ, ಥಳಿತಕ್ಕೊಳಗಾದ ವ್ಯಕ್ತಿಯೊಂದಿಗೂ ಮಾತನಾಡಿ ನಾನು ಕ್ಷಮೆ ಕೇಳಿದ್ದೇನೆ ಎಂದು ಹೇಳಿದ್ದಾರೆ. ಆದರೆ ಪ್ರಯಾಣಿಕನಿಗೆ ಥಳಿಸಿದ್ದ ಸಿಬ್ಬಂದಿಯನ್ನು ಹೊರತುಪಡಿಸಿ, ವಿಡಿಯೋ ರೆಕಾರ್ಡ್ ಮಾಡಿದ್ದ ನೌಕರನ ವಿರುದ್ಧ ಏರ್ ಇಂಡಿಗೋ ಕ್ರಮ ಕೈಗೊಂಡಿದೆ. 
SCROLL FOR NEXT