ದೇಶ

ಸಲಿಂಗಕಾಮ ಪ್ರವೃತ್ತಿಯಷ್ಟೇ, ಶಾಶ್ವತವಲ್ಲ: ಶ್ರೀ ಶ್ರೀ ರವಿಶಂಕರ್

Srinivasamurthy VN
ನವದೆಹಲಿ: ಸಲಿಂಗಕಾಮ ಪ್ರವೃತ್ತಿಯಷ್ಟೇ.. ಅದು ಶಾಶ್ವತವಲ್ಲ ಎಂದು ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಹಾಗೂ ಖ್ಯಾತ ಧಾರ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಹೇಳಿದ್ದಾರೆ. 
ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರೂ ಅವರ ಜನ್ಮದಿನ ಹಾಗೂ ಮಕ್ಕಳ ದಿನಾಚರಣೆ ಸಂಬಂಧ ದೆಹಲಿ ಜೆಎನ್ ಯು ವಿವಿಯಲ್ಲಿ ಆಯೋಜಿಸಲಾಗಿದ್ದ 13ನೇ ನೆಹರೂ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳೊಂದಿಗೆ ನಡೆಸಿದ ರವಿಶಂಕರ್ ಅವರು, ಸಲಿಂಗಕಾಮ ಪ್ರವೃತ್ತಿಯಷ್ಟೇ.. ಅದು ಶಾಶ್ವತವಲ್ಲ,, ಪರಿಸ್ಥಿತಿಗೆ ಅನುಗುಣವಾಗಿ ಅದು ಬದಲಾಗುತ್ತದೆ ಎಂದು ಹೇಳಿದ್ದಾರೆ.
ಸಲಿಂಗಕಾಮದ ಕುರಿತು ವಿದ್ಯಾರ್ಥಿಯೋರ್ವ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಲಿಂಗಕಾಮಿಯಾಗಿರುವುದು ಪ್ರವೃತ್ತಿಯಷ್ಟೇ.. ಅದು ಶಾಶ್ವತವಲ್ಲ.. ಕಾಲಾನು ಕ್ರಮದಲ್ಲಿ ಅದು ಬದಲಾಗಬಹುದು. ಸಲಿಂಗ ಕಾಮ ಎನ್ನುವುದು  ಕಾಯಿಲೆ ಅಥವಾ ಮಾನಸಿಕ ರೋಗವಲ್ಲ.. ಅದು ಪ್ರವೃತ್ತಿಯಷ್ಟೇ..ಸಮಾಜ ಇದನ್ನು ಕೀಳಾಗಿ ಕಂಡಾಗ ನೀನು ಅದರ ವಿರುದ್ಧ ಎದ್ದು ನಿಲ್ಲಬೇಕು. ಆಗ ನಿನ್ನನ್ನು ಯಾರೂ ದೂಷಿಸುವುದಿಲ್ಲ.. ಆದರೆ ನೀನು ನಿನ್ನ ಪ್ರವೃತ್ತಿ ಬಗ್ಗೆ  ಬೇಸರಿಸಿಕೊಂಡರೆ ನಿನ್ನನ್ನು ಸಮಾಜದ ಯಾರೂ ಕೂಡ ಸಮಾಧಾನ ಪಡಿಸುವುದಿಲ್ಲ. 
ಪ್ರಸ್ತುತ ನಿನ್ನ ಪ್ರವೃತ್ತಿಯಾಗಿರುವ ಸಲಿಂಗಕಾಮ ಬದಲಾಗಬಹುದು. ಅದೇನೂ ಶಾಶ್ವತವಲ್ಲ. ಕಾಲಾನುಕ್ರಮದಲ್ಲಿ ಬಹುಶಃ ನಿನ್ನ ಪ್ರವೃತ್ತಿ ಬದಲಾಗಿ ಭಿನ್ನಲಿಂಗೀಯ ಕಾಮದತ್ತ ನೀನು ಮರಳಬಹುದು.ಅಂತೆಯೇ ಪ್ರಸ್ತುತ ಭಿನ್ನಿ  ಲಿಂಗೀಯ ಕಾಮದಲ್ಲಿರುವವರೂ ಕೂಡ ಮುಂದೆ ಸಲಿಂಗಿಕಾಮಿಗಳಾಗಬಹುದು ಎಂದು ರವಿಶಂಕರ್ ಹೇಳಿದ್ದಾರೆ.
ಇದೇ ವೇಳೆ ಅಯೋಧ್ಯೆ ರಾಮಮಂದಿರ ಕುರಿತು ಮಾತನಾಡಿದ ರವಿಶಂಕರ್ ಅವರು, ಶೀಘ್ರದಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ, ನವೆಂಬರ್ 16ರಂದು ಅವರನ್ನು ಭೇಟಿ  ಮಾಡಲು ತೆರಳುತ್ತಿದ್ದೇನೆ. ಭೇಟಿ ಹಿಂದೆ ಯಾವುದೇ ರಹಸ್ಯ ಅಜೆಂಡಾವಿಲ್ಲ..ಕೋಮುಸೌಹಾರ್ಧಾರ್ಥವಾಗಿಯೇ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.
SCROLL FOR NEXT