ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋಗಳು 
ದೇಶ

ಗುಜರಾತ್ ಚುನಾವಣೆಗೆ ದಿನಗಣನೆ; ಹಾರ್ದಿಕ್ ಪಟೇಲ್ 'ಸೆಕ್ಸ್ ಸಿಡಿ' ವೈರಲ್!

ಗುಜರಾತ್ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದು ಹೇಳಲಾಗುತ್ತಿದ್ದ ಪಾಟಿದಾರ್ ಹೋರಾಟದ ಪ್ರಮುಖ ನಾಯಕ ಹಾರ್ದಿಕ್ ಪಟೇಲ್ ಗೆ ಭಾರಿ ಹಿನ್ನಡೆಯಾಗಿದ್ದು, ಅವರದ್ದು ಎಂದು ಹೇಳಲಾಗುತ್ತಿರುವ ಸೆಕ್ಸ್ ಸಿಡಿ ಇದೀಗ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.

ನವದೆಹಲಿ: ಗುಜರಾತ್ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದು ಹೇಳಲಾಗುತ್ತಿದ್ದ ಪಾಟಿದಾರ್ ಹೋರಾಟದ ಪ್ರಮುಖ ನಾಯಕ ಹಾರ್ದಿಕ್ ಪಟೇಲ್ ಗೆ ಭಾರಿ ಹಿನ್ನಡೆಯಾಗಿದ್ದು, ಅವರದ್ದು ಎಂದು ಹೇಳಲಾಗುತ್ತಿರುವ  ಸೆಕ್ಸ್ ಸಿಡಿ ಇದೀಗ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
ಹಾರ್ದಿಕ್ ಪಟೇಲ್ ಅವರದ್ದೇ ಎಂದು ಹೇಳಲಾಗುತ್ತಿರುವ ಅಶ್ಲೀಲ ವಿಡಿಯೋಗಳು ಇದೀಗ ಗುಜರಾತ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದು, ಕಳೆದ ಮೇ 26ರಂದು ರೆಕಾರ್ಡ್ ಆಗಿರುವ ಈ ಸಿಡಿಯಲ್ಲಿ ಪಟೇಲ್ ಸಮುದಾಯದ ಮುಖಂಡ  ಹಾರ್ದಿಕ್ ಪಟೇಲ್ ಮಹಿಳೆಯೊಂದಿಗೆ ಬೆಡ್‍ ರೂಮಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದಾರೆ ಎಂದು ದೂರಲಾಗಿದೆ. 
ಈಗ್ಗೆ 10 ದಿನಗಳ ಹಿಂದಷ್ಟೇ ವೈದ್ಯನೋರ್ವನ ಸೆಕ್ಸ್ ಸಿಡಿ ಬಹಿರಂಗವಾಗಿದ್ದಾಗ ಹಾರ್ದಿಕ್ ಪಟೇಲ್, ಇದರಲ್ಲಿ ಅಚ್ಚರಿ ಏನಿಲ್ಲ, ಮುಂದೊಂದು ದಿನ ತಮ್ಮ ಸೆಕ್ಸ್ ವಿಡಿಯೋಗಳನ್ನೂ ಕೂಡ ಬಿಡುಗಡೆ ಮಾಡುತ್ತಾರೆ ಎಂದು  ಹೇಳಿದ್ದರು. ಇದರ ಬೆನ್ನಲ್ಲೇ ಹಾರ್ದಿಕ್ ಪಟೇಲ್ ಅಸಭ್ಯವಾಗಿ ಕಾಣಿಸಿಕೊಂಡಿರುವ ವಿಡಿಯೋ ಇದೀಗ ಬಿಡುಗಡೆಯಾಗಿದೆ. ಇನ್ನು ಹಾರ್ದಿಕ್ ಮಾತ್ರವಲ್ಲದೇ ಮೀಸಲಾತಿ ಹೋರಾಟದಲ್ಲಿ ಕಾಣಿಸಿಕೊಂಡಿದ್ದ ಹಲವರ ಸೆಕ್ಸ್ ಸಿಡಿ ನನ್ನ  ಬಳಿ ಇದೆ ಎಂದು ಸಿಡಿ ಬಿಡುಗಡೆ ಮಾಡಿರುವ ಯುವಕ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಈ ವಿಡಿಯೋದಲ್ಲಿರುವುದು ನಾನಲ್ಲ, ಇದು ಬಿಜೆಪಿ ಕುತಂತ್ರ: ಹಾರ್ದಿಕ್ ಪಟೇಲ್
ಮಾಧ್ಯಮಗಳಲ್ಲಿ ಸೆಕ್ಸ್ ಸಿಡಿ ಬಿಡುಗಡೆಯಾದ ಬಳಿಕ ಪ್ರತಿಕ್ರಿಯಿಸಿದ ಹಾರ್ದಿಕ್ ಪಟೇಲ್, ಈ ಸಿಡಿಯಲ್ಲಿರುವುದು ನಾನಲ್ಲ. ಅದು ನಕಲಿ ಸಿಡಿ. ಪಟೇಲ್ ಮೀಸಲಾತಿ ಹೋರಾಟದ ಹೊಡೆತ ತಾಳಲಾರದೇ ಬಿಜೆಪಿಯವರೇ ನಕಲಿ  ಸಿಡಿ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ಟ್ವಿಟರ್ ನಲ್ಲೂ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಇಂತಹ ನೀಚ ರಾಜಕಾರಣ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!