ಅಯೋಧ್ಯೆ (ಸಂಗ್ರಹ ಚಿತ್ರ) 
ದೇಶ

ರಾಮಜನ್ಮಭೂಮಿ ಚೆಕ್ ಪೋಸ್ಟ್ ಬಳಿ ಅನುಮಾನಾಸ್ಪದ ಓಡಾಟ: 8 ಮಂದಿ ಬಂಧನ

ಅಯೋಧ್ಯೆಯಲ್ಲಿರುವ ರಾಮ ಜನ್ಮಭೂಮಿಯ ಚೆಕ್'ಪೋಸ್ಟ್ ಬಳಿ ಅನುಮಾನಾಸ್ಪದ ಓಡಾಟ ಕಂಡುಬಂದ ಹಿನ್ನಲೆಯಲ್ಲಿ 8 ಮಂದಿಯನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧನಕ್ಕೊಳಪಡಿಸಿದ್ದಾರೆ...

ಲಖನೌ: ಅಯೋಧ್ಯೆಯಲ್ಲಿರುವ ರಾಮ ಜನ್ಮಭೂಮಿಯ ಚೆಕ್'ಪೋಸ್ಟ್ ಬಳಿ ಅನುಮಾನಾಸ್ಪದ ಓಡಾಟ ಕಂಡುಬಂದ ಹಿನ್ನಲೆಯಲ್ಲಿ 8 ಮಂದಿಯನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧನಕ್ಕೊಳಪಡಿಸಿದ್ದಾರೆ. 
ರಾಜಸ್ತಾನದ ನಗೌರ್ ಜಿಲ್ಲೆಯ ಕಾಳಿನಗರ ಬಸ್ನಿ ಗ್ರಾಮದ ನಿವಾಸಿಗಳಾಗಿರುವ 8 ಮಂದಿ ಯುವಕರು ಕಾರಿನಲ್ಲಿ ರಾಮಜನ್ಮಭೂಮಿಗೆ ಬರುತ್ತಿದ್ದರು. ರಾತ್ರಿ 2 ಗಂಟೆ ಸುಮಾರಿಗೆ ಭದ್ರತಾ ಸಿಬ್ಬಂದಿಗಳು ಕಾರನ್ನು ತಡೆದಿದ್ದಾರೆ. ಈ ವೇಳೆ ಯುವಕರು ನ.15 ರಂದು ಅಯೋಧ್ಯೆಗೆ ಬಂದಿದ್ದು, ನಾವು ಯಾತ್ರಾರ್ಥಿಗಳು ಎಂದು ಹೇಳಿದ್ದಾರೆ. ಅಲ್ಲದೆ, ಉತ್ತರಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಕಿಚೌಚಾಗೆ ಶರೀಫ್'ಗೆ ತೆರಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. 
ಬಳಿಕ ಯುವಕರ ಮೇಲೆ ಅನುಮಾನಗೊಂಡಿರು ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯದ ಯುವಕರನ್ನು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದುಬಂದಿದೆ. 
ಹೆಚ್ಚವರಿ ಎಸ್'ಪಿ ರಾಜೇಶ್ ಸಹ್ನಿ ನೇತೃತ್ವದ ಉಗ್ರ ನಿಗ್ರಹ ತಂಡ ಇದೀಗ ಲಖನೌಗೆ ಆಗಮಿಸಿದ್ದು, ಯುವಕರನ್ನು ವಿಚಾರಣೆಗೊಳಪಡಿಸಿದೆ ಎಂದು ವರದಿಗಳು ತಿಳಿಸಿವೆ. 
ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ನಗೌರ್ ಪೊಲೀಸರು, ಯುವಕರು ಈ ಹಿಂದೆ ಯಾವುದೇ ರೀತಿಯ ಕ್ರಿಮಿನಲ್ ಪ್ರಕರಣಗಳಲ್ಲಿ ದಾಖಲಾಗಿಲ್ಲ. ಪ್ರಸ್ತುತ ಬಂಧನಕ್ಕೊಳಗಾಗಿರುವ ಹಿನ್ನಲೆಯಲ್ಲಿ ಎಲ್ಲಾ ರೀತಿಯ ಆಯಾಮದಲ್ಲಿಯೂ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!