ದೇಶ

'ಮೂಡೀಸ್ ರೇಟಿಂಗ್ ನೀಡಿದ್ದು ಆಸ್ಟ್ರೇಲಿಯಾ ಕ್ರಿಕೆಟರ್ ಟಾಮ್ ಮೂಡಿ!' ಸಾಮಾಜಿಕ ತಾಣಗಳಲ್ಲಿ ಕೇರಳ ಸಿಪಿಎಂ ಎಡವಟ್ಟು

Raghavendra Adiga
ತಿರುವನಂತಪುರಂ: ಭಾರತಕ್ಕೆ ಮೂಡಿ ರೇಟಿಂಗ್‌ ಉನ್ನತೀಕರಣ ಮಾಡಿದ್ದು ರಾಷ್ಟ್ರವು ಜಾಗತಿಕ ಮನ್ನಣೆ ಗಳಿಸಿದೆ. ಇದರಿಂದಾಗಿ ಹಲವಾರು ಮಂದಿ ಸಂತಸಗೊಂಡಿದ್ದಾರೆ. ಆದರೆ ಕೇರಳ ಸಿಪಿಎಂ ಮುಖಂದರು ಇದನ್ನು ಸಹಿಸದೆ ಹೋಗಿದ್ದು ಅವರು ಮೂಡಿ ರೇಟಿಂಗ್ ನ್ನು ಟೀಕಿಸಲು ಹೋಗಿ ಭಾರೀ ಎಡವಟ್ಟು ಮಾಡಿಕೊಂಡಿದ್ದಾರೆ.
ಮೂಡಿ ರೇಟಿಂಗ್‌ನಲ್ಲಿ ಭಾರತಕ್ಕೆ ಉನ್ನತೀಕರಣ ದೊರಕಿರುವುದನ್ನು ತಪ್ಪಾಗಿ ಗ್ರಹಿಸಿದ ಕೇರಳ ಸಿಪಿಎಂ ಪಕ್ಷ ತನ್ನ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಪೇಜಿನಲ್ಲಿ ಅದರ ವಿರುದ್ಧ ಟೀಕೆಗಳ ಸುರಿಮಳೆ ನಡೆಸಿದೆ. ಆದರೆ ಮೂಡೀಸ್ ಜಾಗತಿಕ ರೇಟಿಂಗ್ ಸಂಸ್ಥೆಯನ್ನು ಟೀಕಿಸಲು ಹೋದ ಸಿಪಿಎಂ  ಅದರ ಬದಲಿಗೆ ಆಸ್ಟ್ರೇಲಿಯಾದ ಕ್ರಿಕೆಟಿಗ ಟಾಮ್‌ ಮೂಡಿ ಅವರನ್ನು ಟೀಕಿಸಿದ್ದಾರೆ!
"ಭಾರತದ ಆರ್ಥಿಕತೆಯ ಬಗೆಗೆ ತಿಳಿದುಕೊಳ್ಳದ ಮೂಡಿ ಬಾರತ್ಕ್ಕೆ ರೇಟಿಂಗ್ ನೀಡಿರುವುದು ಸರಿಯಿಲ್ಲ, ಇಂತಹಾ ರೇಟಿಂಗ್ ನೀಡಿದ ನೀನು ಕೇರಳಕ್ಕೆ ಬಂದರೆ ಸರಿಯಾಗಿ ವಿಚಾರಿಸಿಕೊಳ್ಳುತ್ತೇವೆ" ಎಂದು ಪುಂಖಾನುಪುಂಖವಾಗಿ ಕ್ರಿಕೆಟಿಗ ಮೂಡಿ ವಿರುದ್ಧ ಹರಿಹಾಯ್ದಿದ್ದಾರೆ.
ಇನ್ನೂ ಕೆಲವರು ಮೂಡಿ, "ಪ್ರಧಾನಿ ಮೋದಿಯವರಿಂದ ಲಂಚ ಪಡೆದು ಭಾರತಕ್ಕೆ ರೇಟಿಂಗ್ ನೀಡಿದ್ದಾರೆ" ಎಂದು ದೂಷಿಸಿದ್ದಾರೆ.
ಪಕ್ಷದ ಸಾಮಾಜಿಕ ಜಾಲತಾಣ ಉಸ್ತುವಾರಿ ವಹಿಸಿಕೊಂಡಿರುವ ಕೆಲವು ಯುವ ಕಾರ್ಯಕರ್ತರು ಈ ರೀತಿಯ ಎಡವಟ್ಟುಗಳನ್ನು ಮಾಡಿದ್ದು ಇದರಿಂದ ಬೇಸತ್ತ ಕೆಲವು ಮಲಯಾಳಿ ಪೇಸ್ ಬುಕ್ ಬಳಕೆದಾರರು ಕ್ರಿಕೆಟಿಗ ಟಾಮ್ ಮೂಡಿ ಅವರಲ್ಲಿ ಕ್ಷಮೆ ಕೋರಿದ್ದಾರೆ.
SCROLL FOR NEXT