ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪದ್ಮಾವತಿ ದೀಪಿಕಾ ತಲೆಗೆ ಇನಾಮು ಘೋಷಿಸಿದ ನಾಯಕನ ವಿರುದ್ಧ ಬಿಜೆಪಿ ಖಂಡನೆ

ಪದ್ಮಾವತಿ ನಟಿ ದೀಪಿಕಾ ಪಡುಕೋಣೆ ತಲೆ ಕತ್ತರಿಸುವವರಿಗೆ ಇನಾಮು ನೀಡುವುದಾಗಿ ಘೋಷಣೆ ಮಾಡಿದ ತನ್ನದೇ ಮುಖಂಡನ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕವಾಗಿ ನಟಿಯ ಬಳಿ ಬೇಷರತ್ ಕ್ಷಮೆ ಯಾಚಿಸುವಂತೆ ಸೂಚನೆ ನೀಡಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 21 Nov 2017, 9:45 am
ಮುಂಬೈ: ಪದ್ಮಾವತಿ ನಟಿ ದೀಪಿಕಾ ಪಡುಕೋಣೆ ತಲೆ ಕತ್ತರಿಸುವವರಿಗೆ ಇನಾಮು ನೀಡುವುದಾಗಿ ಘೋಷಣೆ ಮಾಡಿದ ತನ್ನದೇ ಮುಖಂಡನ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕವಾಗಿ ನಟಿಯ ಬಳಿ  ಬೇಷರತ್ ಕ್ಷಮೆ ಯಾಚಿಸುವಂತೆ ಸೂಚನೆ ನೀಡಿದೆ.
ಹರ್ಯಾಣದ ಬಿಜೆಪಿ ಘಟಕದ ಮುಖ್ಯಸ್ಥ ಅನಿಲ್ ಜೈನ್ ಅವರು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ತಲೆ ಕಡಿಯುವ ಸಂಸ್ಕೃತಿ ಬಿಜೆಪಿ ಪಕ್ಷದ್ದಲ್ಲ... ಪದ್ಮಾವತಿ ಚಿತ್ರ ಸಂಬಂಧ ಯಾವುದೇ ಸಮಸ್ಯೆಗಳಿರಬಹುದು. ಆದರೆ  ನಟಿಯೊಬ್ಬರ ತಲೆ ಕಡಿಯುವ ಹೇಳಿಕೆ ನೀಡುವುದು ಅಕ್ಷಮ್ಯ. ಹೀಗಾಗಿ ಬಿಜೆಪಿ ನಾಯಕ ಸೂರಜ್ ಪಾಲ್ ಅಮು, ಕೂಡಲೇ ಸಾರ್ವಜನಿಕವಾಗಿ ನಟಿಯ ಕ್ಷಮೆ ಯಾಚಿಸಬೇಕು ಎಂದು ಸೂಚಿಸುತ್ತೇವೆ ಎಂದು ಹೇಳಿದರು.
ಅಂತೆಯೇ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಅವರು, ಚಿತ್ರದ ನಿರ್ದೇಶಕರು ಭಾರತದ ಇತಿಹಾಸ ಮತ್ತು ರಾಜವಂಶಗಳ ಬಗ್ಗೆ ಗೌರವ ನೀಡಬೇಕು. ಇತಿಹಾಸವನ್ನು ಸಂಪೂರ್ಣ  ತಿಳಿಯದೇ ಐತಿಹಾಸಿಕ ವ್ಯಕ್ತಿಗಳ ಚಾರಿತ್ರ್ಯ ವಧೆ ಮಾಡಬಾರದು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments