ದೇಶ

ಕೇರಳ ಲವ್ ಜಿಹಾದ್ ಪ್ರಕರಣ: ಹಾದಿಯಾ ತಪ್ಪೊಪ್ಪಿಗೆ ಪತ್ರ (ಕಾಂಡೋನೇಷನ್ ಲೆಟರ್) ನೀಡಬೇಕು, ಪ್ರಾಂಶುಪಾಲರ ಹೇಳಿಕೆ

Raghavendra Adiga
ನವದೆಹಲಿ: ಕೇರಳ ಲವ್ ಜಿಹಾದ್ ಪ್ರಕರಣದ ಯುವತಿ ಹಾದಿಯಾ ಇದೀಗ ಪುನಃ ಕಾಲೇಜು ವಿದ್ಯಾಭ್ಯಾಸ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ.ಆಕೆಗೆ ಸೂಕ್ತ ಭದ್ರತೆಯೊಡನೆ ಸೇಲಂ ಗೆ ಕಳಿಸಿದ ನ್ಯಾಯಾಲಯ ಸೇಲಂ ಕಾಲೇಜಿನಲ್ಲಿ ಆಕೆಗೆ ಮರುಪ್ರವೇಶ ನೀಡುವಂತೆ ಸೂಚಿಸಿದೆ.
ಇದೇ ವೇಳೆ ಶಿವರಾಜ್ ಹೋಮಿಯೋಪತಿ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ,ಪ್ರಾಂಶುಪಾಲರು  ಜಿ ಕಣ್ಣನ್  "ತಾವು ಆಕೆಗೆ ಮರುಪ್ರವೇಶಕ್ಕೆ ಅವಕಾಶ ನೀಡುತ್ತೇವೆ. ಆದರೆ ಕಾಲೇಜು ನಿಯಮಾನುಸಾರ ಆಕೆ ತಪ್ಪೊಪ್ಪೊಗೆ ಪತ್ರ (ಕಾಂಡೋನೇಷನ್ ಲೆಟರ್)  ಬರೆದು ನೀಡಬೇಕಾಗುತ್ತದೆ. ಆಕೆಯು ತೊಂಭತ್ತು ದಿನಗಳಿಗೆ ಮೇಲ್ಪಟ್ಟು ರಜೆ ಪಡೆದ ಕಾರಣ ಎಲ್ಲಾ ವಿದ್ಯಾರ್ಥಿಗಳಂತೆ ಅವಳಿಗೂ ಈ ನಿಯಮ ಪಾಲನೆ ಅಗತ್ಯವಾಗಿದೆ. ಈ ಪತ್ರವನ್ನು ನಾವು ಎಂಜಿಆರ್ ವಿಶ್ವವಿದ್ಯಾನಿಲಯಕ್ಕೆ ಕಳಿಸುತ್ತೇವೆ. ಎಂದಿದ್ದಾರೆ.
"ಕೋರ್ಟ್ ಆದೇಶವು ಇನ್ನೂ ನಮಗೆ ತಲುಪಿಲ್ಲ ನ್ಯಾಯಾಲಯವು ನಮಗೆ ಏನನ್ನು ಮಾಡಲು ನಿರ್ದೇಶಿಸುತ್ತದೆಯೋ , ನಾವು ಹಾಗೆ ಮಾಡುತ್ತೇವೆ. ನ್ಯಾಯಾಲಯವು ನಮ್ಮನ್ನು ಕೇಳಿದರೆ ಮಾತ್ರ ನಾವು ಆಕೆಯ ರಕ್ಷಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. " ಅವರು ಹೇಳಿದ್ದಾರೆ.
SCROLL FOR NEXT