ದೇಶ

ಭಾರತದಲ್ಲಿ ಅಧಿಕವಾಗುತ್ತಿರುವ ಆನ್ ಲೈನ್ ಕಿರುಕುಳ ಪ್ರಕರಣ, ಮುಂಚೂಣಿಯಲ್ಲಿ ಮುಂಬೈ

Sumana Upadhyaya
ನವದೆಹಲಿ: ಭಾರತದಲ್ಲಿ ಆನ್ ಲೈನ್ ಕಿರುಕುಳ ಪ್ರಕರಣ ಹೆಚ್ಚಾಗುತ್ತಿದ್ದು, ಸಮೀಕ್ಷೆಗೊಳಪಟ್ಟ ಪ್ರತಿ ಹತ್ತರಲ್ಲಿ 8 ಮಂದಿ ಒಂದಲ್ಲ, ಇನ್ನೊಂದು ರೂಪದಲ್ಲಿ ಆನ್ ಲೈನ್ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ಸಿಮಂಟೆಕ್ ನ ಜಾಗತಿಕ ಸೈಬರ್ ಭದ್ರತಾ ಸಂಸ್ಥೆ ನಾರ್ಟನ್ ಹೇಳಿದೆ.
ಸೈಬರ್ ಮೂಲಕ ಅತಿ ಹೆಚ್ಚು ಪ್ರಮಾಣದ ಶಾರೀರಿಕ ಹಿಂಸೆಗೆ ಬಲಿಯಾದವರಲ್ಲಿ ಮುಂಬೈಯಲ್ಲಿ ಅಧಿಕ ಮಂದಿ ಶೇಕಡಾ 51ರಷ್ಟಿದ್ದು, ದೆಹಲಿಯಲ್ಲಿ ಶೇಕಡಾ 47, ಹೈದರಾಬಾದಿನಲ್ಲಿ ಶೇಕಡಾ 46ರಷ್ಟು ಮಂದಿ ಆನ್ ಲೈನ್ ಕಿರುಕುಳಕ್ಕೆ ಒಳಗಾಗಿದ್ದಾರೆ.
ಆನ್ ಲೈನ್ ನಲ್ಲಿ ಅತ್ಯಂತ ಸಾಮಾನ್ಯ ಕಿರುಕುಳವೆಂದರೆ ನಿಂತಿಸುವುದು, ಅವಮಾನ ಮಾಡುವುದು,(ಶೇಕಡಾ 63) ಮತ್ತು ದುರುದ್ದೇಶಪೂರ್ವಕವಾಗಿ ವದಂತಿಗಳನ್ನು (ಶೇಕಡಾ 59) ಹಬ್ಬಿಸುವುದಾಗಿದೆ.
ಆಘಾತಕಾರಿ ಅಂಶವೆಂದರೆ ಶೇಕಡಾ 87ರಷ್ಟು ನ್ಯೂನತೆ ಹೊಂದಿರುವ ವ್ಯಕ್ತಿಗಳು ಅಥವಾ ಮಾನಸಿಕ ರೋಗಿಗಳು ಮತ್ತು ಶೇಕಡಾ 77ರಷ್ಟು ಮಂದಿ ಸ್ಥೂಲಕಾಯದವರು ನಿಂದನೆ, ಅವಮಾನಗಳನ್ನು ಅನುಭವಿಸುತ್ತಾರೆ.
ಭಾರತ ದೇಶದಲ್ಲಿ ಆನ್ ಲೈನ್ ಕಿರುಕುಳ ನಿಜಕ್ಕೂ ಕಳವಳಕಾರಿ ವಿಷಯವಾಗಿದೆ. ಇತ್ತೀಚಿನ ಸಂಶೋಧನೆ ಪ್ರಕಾರ ಆನ್ ಲೈನ್ ಕಿರುಕುಳದಲ್ಲಿ ಶಾರೀರಿಕ ಹಿಂಸೆ (ಶೇಕಡಾ 45), ಸೈಬರ್ಬುಲ್ಲಿ(ಶೇಕಡಾ 44), ಸೈಬರ್ ಸ್ಟಾಕಿಂಗ್ (ಶೇಕಡಾ 45) ಅತಿ ಹೆಚ್ಚಾಗಿದೆ ಎಂದು ನಾರ್ಟನ್ ನ ಕಂಟ್ರಿ ಮ್ಯಾನೇಜರ್ ರಿತೇಶ್ ಚೋಪ್ರಾ ತಿಳಿಸಿದ್ದಾರೆ.
SCROLL FOR NEXT