ದೇಶ

ಪಾಕಿಸ್ತಾನದ ಅಣ್ವಸ್ತ್ರ ಶಸ್ತ್ರಾಗಾರ, ಇತರ ಪ್ರದೇಶಗಳನ್ನು ಹೊಡೆದುರುಳಿಸುವ ಸಾಮರ್ಥ್ಯವಿದೆ: ವಾಯುಪಡೆ ಮುಖ್ಯಸ್ಥ

Srinivas Rao BV
ನವದೆಹಲಿ: ಪಾಕಿಸ್ತಾನದಲ್ಲಿರುವ ಅಣ್ವಸ್ತ್ರಗಳನ್ನು ಹಾಗೂ ಇತರ ಗುರಿಗಳನ್ನು ಗುರುತಿಸಿ ಹೊಡೆದುರುಳಿಸುವ ಸಾಮರ್ಥ್ಯ ಭಾರತೀಯ ವಾಯುಪಡೆಗೆ ಇದೆ ಎಂದು ವಾಯುಪಡೆ ಮುಖ್ಯಸ್ಥ ಬಿ.ಎಸ್. ಧನೋವಾ ಹೇಳಿದ್ದಾರೆ. 
ಪಾಕಿಸ್ತಾನದ ಅಣ್ವಸ್ತ್ರಗಳ ಕುರಿತು ಉಂಟಾಗುತ್ತಿರುವ ಜಾಗತಿಕ ಮಟ್ಟದ ಆತಂಕದ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ವಾಯುಪಡೆ ಮುಖ್ಯಸ್ಥ ಬಿಎಸ್ ಧನೋವಾ, ಅಗತ್ಯವಾದರೆ ಪಾಕಿಸ್ತಾನದ ಅಣ್ವಸ್ತ್ರ ಶಸ್ತ್ರಾಗಾರವನ್ನು ಗುರುತಿಸಿ ನಾಶ ಮಾಡುತ್ತೇವೆ ಎಂದು ಹೇಳಿದ್ದಾರೆ. 
ಶತ್ರುಗಳು ಅಣ್ವಸ್ತ್ರವನ್ನು ಪ್ರಯೋಗಿಸಲು ಮುಂದಾದರೆ ಅವರ ಅಣ್ವಸ್ತ್ರ ಶಸ್ತ್ರಾಗಾರವೂ ಸೇರಿದಂತೆ ಬೇರೆ ಪ್ರದೇಶಗಳನ್ನು ಗುರುತಿಸಿ ಹೊಡೆದುರುಳಿಸುತ್ತೇವೆ, ಆ ಸಾಮರ್ಥ್ಯ ಭಾರತೀಯ ವಾಯುಪಡೆಗೆ ಇದೆ ಯಾವುದೇ ಪರಿಸ್ಥಿತಿ, ಸವಾಲುಗಳು ಎದುರಾದರೂ ಅದನ್ನು ಎದುರಿಸಲು, ದಿಟ್ಟ ಉತ್ತರ ನೀಡಲು ನಮ್ಮ ಸೇನಾಪಡೆ ಸಿದ್ಧವಾಗಿದೆ. ಎಂದು ತಿಳಿಸಿದ್ದಾರೆ. 
SCROLL FOR NEXT