ನವದೆಹಲಿ: 15 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ದೆಹಲಿಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ, ಸದ್ಯ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 5 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಯನ್ನು ಖಾಯಂ ಮಾಡುವ ಮಸೂದೆಯನ್ನು ದೆಹಲಿ ವಿಧಾನಸಭೆ ಅಂಗೀಕರಿಸಿದ್ದು, ಲೆಪ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಮತ್ತು ಕೇಜ್ರಿವಾಲ್ ನಡುವಿನ ಜಂಗಿ ಕುಸ್ತಿಗೆ ಕಾರಣವಾಗಿದೆ.
ಈ ಮಸೂದೆ ಅಂಗೀಕರಿಸುವ ಮುನ್ನ ತಮ್ಮ ಶಿಫಾರಸನ್ನು ಮರುಪರಿಶೀಲಿಸಬೇಕು ಎಂದು ಲೆ, ಗವರ್ನರ್ ಅನಿಲ್ ಬೈಜಲ್ ಒತ್ತಾಯಕ್ಕೆ ಕೋಪಗೊಂಡ ಕೇಜ್ರಿವಾಲ್ ನಾನು ಚುನಾಯಿತ ಮುಖ್ಯಮಂತ್ರಿ, ಭಯೋತ್ಪಾದಕನಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ವಿಧಾನಸಭೆ ಭಾಷಣ ಮಾಡಿದ ಕೇಜ್ರಿವಾಲ್ ದೆಹಲಿಯ ಅಧಿಕಾರಿ ವರ್ಗವನ್ನು ತರಾಟೆಗೆ ತೆಗೆದುಕೊಂಡರು, ದೇಶ ನಡೆಯುತ್ತಿರುವುದು ಪ್ರಜಾಪ್ರಭುತ್ವದಿಂದ, ಅಧಿಕಾರಿಗಳಿಂದಲ್ಲ ಎಂದು ಕಿಡಿಕಾರಿದರು.
ಅಸಂವಿಧಾನಾತ್ಮಕವಾಗಿ ಮಸೂದೆ ಪಾಸು ಮಾಡಬಾರದೆಂದು ಅನಿಲ್ ಬೈಜಲ್ ಸಲಹೆ ನೀಡಿದ್ದರು. ಸದ್ಯ ವಿಧಾನ ಸಭೆಯಲ್ಲಿ ಮಸೂದೆ ಅಂಗೀಕಾರವಾಗಿದ್ದು, ಅನುಮೋದನೆಗಾಗಿ ಈ ಬಿಲ್ ಲೆಫ್ಟಿನೆಂಟ್ ಗವರ್ನರ್ ಅಂಗಳಕ್ಕೆ ತಲುಪಿದೆ.