ದೇಶ

ನಾಸಾದಿಂದ ಚಂದ್ರನ ಅಂಗಳಕ್ಕೆ ಮಾನವ: ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್

Srinivas Rao BV
ವಾಷಿಂಗ್ ಟನ್: ಮಂಗಳನ ಅಂಗಳಕ್ಕೆ ಗಗನಯಾತ್ರಿಗಳನ್ನು ಕಳಿಸುವುದಕ್ಕೂ ಮುನ್ನ ಚಂದ್ರನ ಅಂಗಳದಲ್ಲಿ ಜೀವದ ಅಸ್ತಿತ್ವವಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಮತ್ತೊಮ್ಮೆ ಚಂದ್ರನ ಅಂಗಳಕ್ಕೆ ಮಾನವನನ್ನು ಕಳಿಸುವಂತೆ ನಾಸಾಗೆ ಡೊನಾಲ್ಡ್ ಟ್ರಂಪ್ ಅವರ ಆಡಳಿತ ನಿರ್ದೇಶನ ನೀಡಲಿದೆ ಎಂದು ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಹೇಳಿದ್ದಾರೆ. 
ನ್ಯಾಷನಲ್ ಸ್ಪೇಸ್ ಕೌನ್ಸಿಲ್ ನ ಉದ್ಘಾಟನಾ ಭಾಷಣದಲ್ಲಿ ಮೈಕ್ ಪೆನ್ಸ್ "ಚಂದ್ರನ ಅಂಗಳಕ್ಕೆ ನಾಸಾ ಗಗನಯಾತ್ರಿಗಳನ್ನು ಕಳಿಸಲಿದ್ದೇವೆ, ಅಲ್ಲಿ ಧ್ವಜ ಹಾರಿಸುವುದಷ್ಟೇ ಅಲ್ಲದೇ, ಸ್ಮಾರಕವನ್ನೂ ಸ್ಥಾಪಿಸಲಿದ್ದೇವೆ, ಅಮೆರಿಕನ್ನರು ಮಂಗಳನನ್ನೂ ಮೀರಿ ಹೋಗಬೇಕೆಂದು ಹೇಳಿದ್ದಾರೆ. 
ಬಾಹ್ಯಾಕಾಶ ಅಮೆರಿಕದ ರಾಷ್ಟ್ರೀಯ ಆದ್ಯತೆ ಎಂದು ಉಪಾಧ್ಯಕ್ಷ ಮೈಕ್ ಪೆನ್ಸ್ ಘೋಷಿಸಿ ಚಂದ್ರನ ಅಂಗಳಕ್ಕೆ ನಾಸಾ ಗಗನಯಾತ್ರಿಗಳನ್ನು ಕಳಿಸುವಂತೆ ನಿರ್ದೇಶನ ನೀಡಿದ್ದಾರೆ ಎಂದು ನಾಸಾ ಆಡಳಿತಾಧಿಕಾರಿ ರಾಬರ್ಟ್ ಲೈಟ್ಫುಟ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. 
SCROLL FOR NEXT