ದೇಶ

ವಾರಣಾಸಿ: ಬಿಎಚ್ ಯು ನಲ್ಲಿ ಫಿಜಿ ವಿದ್ಯಾರ್ಥಿಯ ಮೇಲೆ ರ್ಯಾಗಿಂಗ್, ನಾಲ್ವರ ಮೇಲೆ ಎಫ್ ಐಆರ್ ದಾಖಲು

Raghavendra Adiga
ವಾರಣಾಸಿ:  ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ (ಬಿ ಎಚ್ ಯು) ದಲ್ಲಿ ಫಿಜಿಯ ವಿದ್ಯಾರ್ಥಿಯು ಮೇಲೆ ರ್ಯಾಗಿಂಗ್ ಮತ್ತು ಹಲ್ಲೆ ನಡೆದಿದ್ದು ನಾಲ್ವರ ಮೇಲೆ ಎಫ್  ಆರ್ ದಾಖಲಾಗಿದೆ.
ಫಿಜಿ ಮೂಲದ ಬಿಎ ಪ್ರಥಮ ವರ್ಷದ ವಿದ್ಯಾರ್ಥಿ ಮುನೀಶ್ ಮೇಲೆ ಹಲ್ಲೆ ಮತ್ತು ರ್ಯಾಗಿಂಗ್ ನಡೆದಿದೆ. ಮುನೀಶ್ ಹಿರಿಯ ವಿದ್ಯಾರ್ಥಿಗಳ ಆದೇಶ ಪಾಲಿಸದೆ ಇದ್ದ ಕಾರಣಕ್ಕೆ ಅವನ ಮೇಲೆ ಹಲ್ಲೆ ನಡೆದಿರುವುದಾಗಿ ಪೋಲೀಸರು ತಿಳಿಸಿದ್ದಾರೆ.
ವಿಶ್ವವಿದ್ಯಾನಿಲಯದ 'ಮೈತ್ರಿ' ಕ್ಯಾಂಟೀನ್ ನಲ್ಲಿ ಮುನೀಶ್ ಮೇಲೆ ಮೇಲೆ ಚಹಾ ಎರಚಲಾಗಿದೆ 
ಶುಕ್ರವಾರ, ಮುನಿಷ್ ಉಪನ್ಯಾಸಗಳಿಗೆ ಹಾಜರಾಗಲು ಹೊರಟಿದ್ದಾಗ, ಹಿರಿಯ ವಿದ್ಯಾರ್ಥಿಗಳು ಆತನನ್ನು ನಿಲ್ಲಿಸಿದ್ದಲ್ಲದೆ ತಮಗೆ "ಸರ್" ಎನ್ನುವಂತೆಯೂ  "ನಮಸ್ತೆ"ಎಂದು ಗೌರವಿಸುವಂತೆಯೂ ಸೂಚಿಸಿದ್ದಾರೆ.  ಫಿಜಿ ವಿದ್ಯಾರ್ಥಿ ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ, ಹಿರಿಯ ವಿದ್ಯಾರ್ಥಿಗಳು ಆತನೊಡನೆ ಆಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಪೋಲೀಸರು ಹೇಳಿದರು.
ಪುನಃ ಮರುದಿನ 'ಮೈತ್ರಿ' ಕ್ಯಾಂಟೀನ್ ನಲ್ಲಿ ಮುನೀಶ್ ನನ್ನು ತಡೆದು ಆತನ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳು ಅವನ ಮುಖದ ಮೇಲೆ ಚಯಾ ಎರಚಿದ್ದಾರೆ.
ಮುನಿಶ್ ಬಿಎಚ್ ಯು ನ ಇಂಟರ್ ನ್ಯಾಷನಲ್ ಸೆಂಟರ್ ನ ಅಧ್ಯಕ್ಷರಾದ ಪ್ರೊಫೆಸರ್ ಎಚ್.ಬಿ.ಶ್ರೀವಾಸ್ತವ ಅವರಿಗೆ ಈ ಕುರಿತು ದೂರು ನೀಡಿದ್ದಾರೆ. ಅವರು ವಿಶ್ವ ವಿದ್ಯಾನಿಲಯದ ಮುಖ್ಯ ದೂರು ಕೇಂದ್ರಕ್ಕೆ ಈ ಮಾಹಿತಿ ರವಾನಿಸಿದ್ದರು. ಇದರ ತರುವಾಯ ವಿಶ್ವವಿದ್ಯಾನಿಲಯವು ಈ ಪ್ರಕರಣ ತನಿಖೆಯನ್ನು ಪೋಲೀಸರಿಗೆ ಒಪ್ಪಿಸಿದೆ.
SCROLL FOR NEXT