ವಿಜಯವಾಡ: ಶ್ರೀ ಚೈತನ್ಯ ಜೂನಿಯರ್ ಕಾಲೇಜಿನಲ್ಲಿ ಬೆಳಗ್ಗೆ 5ರಿಂದ ದಿನದ ಪ್ರಾರಂಭವಾಗುತ್ತದೆ. "ರಾಕ್ಷಸರ ಉಪಟಳ ಅಲ್ಲಿಂದಲೇ ಪ್ರಾರಂಭವಾಗುತ್ತದೆ" ಎಂದು ಇತ್ತೀಚೆಗೆ ಪೋರಂಕಿ ಕ್ಯಾಂಪಸ್ ನಿಂದ ಹೊರಬಂದ ಸಿದ್ಧಾರ್ಥ್ ಹೇಳಿದರು.
"ನಾವು ಐದು ನಿಮಿಷದಲ್ಲಿ ಏಳದೇ ಹೋದರೆ ದೊಣ್ಣೆಗಳಿಂದ ಹೊಡೆತ ತಿನ್ನಬೇಕು. ವಾರ್ಡನ್ ಗಳು ನಮ್ಮನ್ನು ಹಾಸಿಗೆಯಿಂದೆ ಎದ್ದೇಳಿಸಲು ನಮ್ಮನ್ನು ಹೊಡೆಯುತ್ತಾರೆ. ನಾವು ಅವರಿಂದ ಅವಮಾನಿತರಾಗುತ್ತೇವೆ, ಕಿರುಕುಳ ಮತ್ತು ನಿರಂತರ ಭಯದಿಂದ ಜೀವಿಸುತ್ತೇವೆ. ಇಂತಹಾ ಭಯದ ನಡುವೆ ನೀವು ಹೇಗೆ ಅಧ್ಯಯನದಲ್ಲಿ ತೊಡಗಲು ಸಾಧ್ಯ?"
"ತನ್ನ ಅಂಕಗಳು ಅಪೇಕ್ಷಣೀಯ , ಆದರೆ ನಾನು ಖಾಲಿತನವನ್ನು ಅನುಭವಿಸುತ್ತೇನೆ ನಾನುಒಂದು ಸೊನ್ನೆ,ನನಗೆ ಏನೂ ಗೊತ್ತಿಲ್ಲ" ಎನ್ನುವ ಸಿದ್ದಾರ್ಥ್ ನನ್ನು ಅವನಿಗೆ ಇಷ್ಟವಿಲ್ಲದಿದ್ದರೂ ಅವನ ಪೋಷಕರು ಉತ್ತಮ ಶಿಕ್ಷಣಕ್ಕಾಗಿ ಈ ವಸತಿ ಶಾಲೆಗೆ ಸೇರಿಸಿದ್ದರು. ಆದರೆ ಶಾಲಾ ಅದ್ಯಾಪಕರು "ನಾವೆಂದೂ ಹಾಗೆ ಸೇರಿಸಿಕೊಳ್ಳುವುದಿಲ್ಲ" ಎಂದಿದ್ದಾರೆ.
ಬೆಳಗೆದ್ದು ಸ್ನಾನ ಮತ್ತು ಉಪಹಾರ ಪೂರೈಸಿದ ನಂತರ, ಬೆಳಗ್ಗೆ 8 ಗಂಟೆಗೆ ತರಗತಿಗಳು ಪ್ರಾರಂಭವಾಗುವ ಮುನ್ನ ವಿದ್ಯಾರ್ಥಿಗಳು ಹಿಂದಿನ ದಿನದಂದು ಕಲಿಸಿದ ವಿಷಯಗಳ ಮೇಲೆ ಅಭ್ಯಾಸ ನಡೆಸುವರು. ಮಧ್ಯಾಹ್ನ ಊಟಕ್ಕೆಂದು ಒಂದು ಗಂಟೆ ಬಿಟ್ಟರೆ ರಾತ್ರಿ 10 ಗಂಟೆ ವರೆಗೂ ಯಾವುದೇ ವಿರಾಮವಿರುವುದಿಲ್ಲ. ರಾತ್ರಿ 10 ಕ್ಕೆ ಎಲ್ಲರೂ ತಮ್ಮ ಹಾಸ್ಟೆಲ್ ನತ್ತ ತೆರಳುತ್ತಾರೆ.
ಹಾಸ್ಟೆಲ್ ನಲ್ಲಿನ ಕೋಣೆಗಳು ಅತ್ಯಂತ ಕಿರಿದಾಗಿದ್ದು ಕೋಣೆ ಎಡ ಭಾಗದಲ್ಲಿ ಬಟ್ಟೆ ಒಣಹಾಕಲು ತಂತಿ ಕಟ್ಟಗಾಇದೆ. "ಹಲವಾರು ಕೋಣೆಗಳಲ್ಲಿ ಫ್ಯಾನ್ ಗಳು ಕೆಲಸ ಮಾಡುವುದಿಲ್ಲ. ಹೀಗಾಗಿ ಅಲ್ಲಿನ ವಿದ್ಯಾರ್ಥಿಗಳು ಬೇರೆ ಕೋಣೆಗಳಿಗೆ ತೆರಳುತ್ತಾರೆ. ಕೆಲವೊಮ್ಮೆ ಹದಿನಾರು ವಿದ್ಯಾರ್ಥಿಗಳು ಒಂದೇ ಕೋಣೆಯಲ್ಲಿ ನಿದ್ರಿಸುತ್ತಾರೆ. ಆದರೆ ಆ ಕೋಣೆ ಎಂಟು ಜನರಿಗೂ ಸಾಲದಷ್ಟು ಚಿಕ್ಕದಾಗಿರುತ್ತದೆ" ಸಿದ್ದಾರ್ಥ್ ಹೇಳಿದರು. ಆತ ಹಾಸ್ಟೆಲ್ ಎಂದರೆ ಜೈಲುಗಳಿದ್ದಂತಿದೆ ಎಂದು ಭಯದಿಂದ ನುಡಿಯುತ್ತಾನೆ.
"ಒಂದು ಕೋಣೆಯಲ್ಲಿ ಹೆಚ್ಚು ಜಾಗ ಯಾರು ಪಡೆಯುತ್ತಾರೆ ಎನ್ನುವ ವಿಚಾರಕ್ಕೆ ಜಗಳಗಳು ಪ್ರಾರಂಭವಾಗುತ್ತದೆ. ಕೆಲವರು ತಮ್ಮ ಬಟ್ಟೆಗಳನ್ನು ಸಹ ತಾವು ಒಗೆಯುವುದಿಲ್ಲ. ಇತರರಿಂದ ಅದನ್ನು ಮಾಡಿಸುತ್ತಾರೆ. ನೀವೇನಾದರೂ ದುರ್ಬಲರೆಂದು ತೋರಿಸಿಕೊಂಡರೆ ನಿಮ್ಮ ಕಥೆ ಮುಗಿಯಿತೆಂದೇ ಅರ್ಥ " ಸಿದ್ದಾರ್ಥ್ ವಿವರಿಸಿದರು.
ನಾರಾಯಣ ಜೂನಿಯರ್ ಕಾಲೇಜಿನ ಪ್ರಾಂಶುಪಾಲರು "ನಾವು ಉತ್ತಮ ಶ್ರೇಣಿಯನ್ನು ಪಡೆಯುತ್ತಿದ್ದರೆ, ಇದು ಈಗ ಜಾರಿಯಲ್ಲಿರುವ ವ್ಯವಸ್ಥೆಯಿಂದಾಗಿ ಸಾಧ್ಯವಾಗುತ್ತಿದೆ. ಆದರೆ ಇದು ವಿದ್ಯಾರ್ಥಿ ನಡುವೆ ಒತ್ತಡಕ್ಕೆ ಕಾರಣವಾಗುತ್ತದೆ ಎನ್ನುವುದು ಸುಳ್ಳಲ್ಲ. ಇದೀಗ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಮೇಲಿನ ಈ ಒತ್ತಡ ಮಟ್ಟವನ್ನು ತಗ್ಗಿಸಬೇಕೆಂದು ನಮಗೆ ನಿರ್ದೇಶನ ನೀಡಿದೆ, ಸರ್ಕಾರದ ನಿರ್ದೇಶನವನ್ನು ನಾವು ಪಾಲಿಸುವವರಿದ್ದೇವೆ. ಇದೇ ವೇಳೆ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹಿಂದೆ ಬೀಳುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. " ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics