ದೇಶ

ಮೊದಲ 3 ತ್ರೈಮಾಸಿಕದಲ್ಲಿ ಚೀನಾ ಜಿಡಿಪಿ ಶೇ.6.9 ಕ್ಕೆ ಏರಿಕೆ

Srinivas Rao BV
ಬೀಜಿಂಗ್: ಈ ವರ್ಷದ ಮೊದಲ 3 ತ್ರೈಮಾಸಿಕದಲ್ಲಿ ಚೀನಾ ಜಿಡಿಪಿ ಶೇ.6.9 ಕ್ಕೆ ಏರಿಕೆಯಾಗಿದೆ. 
ವರ್ಷದ ಮೊದಲಾರ್ಧದಲ್ಲಿ ಶೇ.6.5 ರಷ್ಟು ಜಿಡಿಪಿ ತಲುಪುವ ಗುರಿ ಹೊಂದಿದ್ದೆವು, ನಿರೀಕ್ಷೆಗೂ ಮೀರಿ ಜಿಡಿಪಿ ಬೆಳವಣಿಗೆಯಾಗಿದೆ ಎಂದು ಚೀನಾದ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಹೇಳಿದೆ. ಶೇ.6.7 ರಿಂದ ಶೇ.6.9 ರವರೆಗೆ ಚೀನಾ ಸತತವಾಗಿ ಜಿಡಿಪಿ ಏರಿಕೆ ಕಂಡಿದ್ದು, ಚೀನಾದ ಆರ್ಥಿಕತೆ ಸ್ಥಿರ ಬೆಳವಣಿಗೆಯಾಗುತ್ತಿದೆ ಎಂದು ಅಲ್ಲಿನ ಮಾಧ್ಯಮಗಳು ವಿಶ್ಲೇಷಿಸಿವೆ. 
ಆರ್ಥಿಕ ರಚನೆ ಹಾಗೂ ಬೆಳವಣಿಗೆ ಗುಣಮಟ್ಟ ಎರಡರಲ್ಲೂ ಸುಧಾರಣೆಯಾಗುತ್ತಿದ್ದು, ಸೇವಾ ಕ್ಷೇತ್ರ ಬೆಳವಣಿಗೆ ಮೊದಲ ಮೂರು ತ್ರೈಮಾಸಿಕದಲ್ಲಿ ಶೇ.7.8 ಕ್ಕೆ ಏರಿಕೆಯಾಗಿದೆ.  
SCROLL FOR NEXT