ನವದೆಹಲಿ: ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗ ಕೆಲ ಪ್ರಮುಖ ಕ್ರಮಗಳನ್ನು ಕೈಗೊಂಡಿದ್ದು, ಪ್ರತೀ ಮತಗಟ್ಟೆಯ ಮತದಾರರ ಸಂಖ್ಯೆಯನ್ನು 1400ಕ್ಕೆ ಮಿತಿಗೊಳಿಸಿದೆ.
ಈ ಹಿಂದೆಲ್ಲ ಮತಗಟ್ಟೆಗಳಲ್ಲಿ 1500ಕ್ಕೂ ಹೆಚ್ಚು ಮತದಾರರನ್ನು ಪಟ್ಟಿಗೆ ಸೇರಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಒಂದು ಮತಗಟ್ಟೆಯಲ್ಲಿ 1400 ಮತದಾರರು ಮಾತ್ರ ಮತದಾನ ಮಾಡಬಹುದಾಗಿದೆ. ಹೌದು..ಮತಗಟ್ಟೆಗಳ ಮತದಾರರ ಸಂಖ್ಯೆಯನ್ನು ಕೇಂದ್ರ ಚುನಾವಣಾ ಆಯೋಗ 1400ಕ್ಕೆ ಮಿತಿಗೊಳಿಸಿದೆ.
ಅಂತೆಯೇ ಮತಗಟ್ಟೆಗಳಲ್ಲಿ ಮತದಾರರ ವಿವರ ನೀಡುವ ವಿವಿಪರಾಟ್ ಗಳಲ್ಲಿ ಮಹತ್ವದ ಬದಲಾವಣೆ ತರಲಾಗುತ್ತಿದ್ದು, 1400 ಚೀಟಿಗಳನ್ನು ಮಾತ್ರ ವಿವಿಪಾಟ್ ಗಳು ಪ್ರಿಂಟ್ ಮಾಡುವಂತೆ ರೂಪಿಸಲಾಗುತ್ತಿದೆ. ಈ ಹಿಂದೆ ಇದ್ದ ವಿವಿಪಾಟ್ ಗಳಲ್ಲಿ 1500ಕ್ಕೂ ಅಧಿಕ ಚೀಟಿಗಳನ್ನು ಮುದ್ರಿಸುವ ಅವಕಾಶವಿತ್ತು. ಆದರೆ ಇನ್ನು ಮುಂದೆ 1400 ಚೀಟಿಗಳನ್ನು ಮಾತ್ರ ಮುದ್ರಿಸುವಂತೆ ವಿವಿಪಾಟ್ ಗಳ ತಂತ್ರಾಂಶ ಬದಲಿಸಲಾಗುತ್ತದೆ ಎಂದು ಆಯೋಗ ಹೇಳಿದೆ.
ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಅಲ್ಲಿಯೇ ಆಯೋಗದ ಈ ನೂತನ ವಿಧಾನ ಅನ್ವಯವಾಗುವ ಸಾಧ್ಯತೆ ಇದೆ. ಹಿಮಾಚಲ ಪ್ರದೇಶದಲ್ಲಿ 1400 ಮತದಾರರನ್ನು ಹೊಂದಿರುವ 7,521 ಮತಗಟ್ಟೆಗಳನ್ನು ತೆರೆಯಲು ಆಯೋಗ ನಿರ್ಧರಿಸಿದ್ದು, ಇದಲ್ಲದೆ ಕೆಲ ಕುಗ್ರಾಮಗಳಲ್ಲಿ 42 ಸಹಾಯಕ ಮತಗಟ್ಟೆಗಳನ್ನು ನಿರ್ಮಿಸಲು ಆಯೋಗ ಚಿಂತನೆ ನಡೆಸಿದೆ. ಹಿಮಾಚಲ ಪ್ರದೇಶದಲ್ಲಿ ಒಟ್ಟು 68 ವಿಧಾನಸಭಾ ಕ್ಷೇತ್ರಗಳಲ್ಲಿದ್ದು, ಆಯೋಗದ ಈ ನೂತನ ವಿಧಾನದಿಂದಾಗಿ ನಿಸ್ಪಕ್ಷಪಾತ ಮತ್ತು ತ್ವರಿತ ಫಲಿತಾಂಶ ದೊರೆಯಲಿದೆ ಎಂದು ಹೇಳಲಾಗುತ್ತಿದೆ.
ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಚುನಾವಣಾ ಆಯೋದಗ ಮತದಾನ ಪ್ರಕ್ರಿಯೆಯಲ್ಲಿ ಕೆಲ ಬದಲಾವಣೆಗಳಿಗೆ ಮುಂದಾಗಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics