ದೇಶ

ಪಂಜಾಬ್: ಓಬಿಸಿ, ಕೆನೆಪದರದ ವಾರ್ಷಿಕ ಆದಾಯ ಮಿತಿ ಹೆಚ್ಚಳ

Raghavendra Adiga
ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಇತರ ಹಿಂದುಳಿದ ವರ್ಗ (ಓಬಿಸಿ) ಮತ್ತು ಹಿಂದುಳಿದ ವರ್ಗಗಳ ಕೆನೆ ಪದರದ ಒಟ್ಟು ವಾರ್ಷಿಕ ಆದಾಯ ಮಿತಿಯನ್ನು ಈಗಿರುವ  6 ಲಕ್ಷದಿಂದ 8 ಲಕ್ಷ ರೂ. ಗೆ ಹೆಚ್ಚಳ ಮಾಡಲು ಅನುಮೋದನೆ ನೀಡಿದ್ದಾರೆ.
ಓಬಿಸಿ ಮತ್ತು ಹಿಂದುಳಿದ ವರ್ಗಗಳ ವಿಷಯದಲ್ಲಿ ಹೆಚ್ಚಿನ ಸಾಮಾಜಿಕ ನ್ಯಾಯ ಸಿಗಬೇಕೆನ್ನುವ ಕೇಂದ್ರ ಸರ್ಕಾರದ ನಿರ್ದೇಶನಕ್ಕೆ ಅನುಗುಣವಾಗಿ ಅವರ ಆದಾಯ ಮಿತಿಯಲ್ಲಿ ಏರಿಕೆ ಮಾಡಲಾಗಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಈ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ಓಬಿಸಿ ಮತ್ತು ಕೆನೆಪದರದವರ ವಾರ್ಷಿಕ ಒಟ್ಟು ಆದಾಯವನ್ನು 6 ರಿಂದ 8 ಲಕ್ಷ  ರೂ.ಗೆ ಏರಿಸಿ ಆದೇಶ ಹೊರಡಿಸಿತ್ತು..
1993ರಲ್ಲಿ ಒಬಿಸಿ ಕೆನೆಪದರ ವಾರ್ಷಿಕ ಆದಾಯ ಮಿತಿ 1 ಲಕ್ಷ ರೂ.ಆಗಿದ್ದಿದ್ದನ್ನು 2004ರಲ್ಲಿ 2.5 ಲಕ್ಷಕ್ಕೆ ಏರಿಸಲಾಗಿತ್ತು. ಮತ್ತೆ 2008ರಲ್ಲಿ 4.5 ಲಕ್ಷ ಕ್ಕೆ, 2013ರಲ್ಲಿ 6ಲಕ್ಕಕ್ಕೆ ಏರಿಕೆ ಮಾಡಲಾಗಿತ್ತು. 1993ರಿಂದ ಈ ತನಕ ಒಟ್ಟು 4 ಬಾರಿ ಓಬಿಸಿ ಮತ್ತು ಹಿಂದುಳಿದ ವರ್ಗದ ಕೆನೆಪದರದವರ  ವಾರ್ಷಿಕ ಆದಾಯ ಮಿತಿಯನ್ನು ಹೆಚ್ಚಳ ಮಾಡಲಾಗಿದೆ..
SCROLL FOR NEXT