ಮೀಟರ್ ಬಡ್ಡಿ ಕಿರುಕುಳ: ಡಿಸಿ ಕಚೇರಿ ಎದುರೇ ಆತ್ಮಹತ್ಯೆ ಮಾಡಿಕೊಂಡ ಕುಟುಂಬ
ತಿರುನೆಲ್ವೇಲಿ: ಮೀಟರ್ ಬಡ್ಡಿ ವ್ಯಾಪಾರಿಗಳ ಕಿರುಕುಳ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಜಿಲ್ಲಾಧಿಕಾರಿ ಕಚೇರಿ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಸೋಮವಾರ ನಡೆದಿದೆ.
ಘಟನೆಯಲ್ಲಿ ಇಬ್ಬರು ಮಕ್ಕಳು ಹಾಗೂ ಪತ್ನಿ ಸಾವನ್ನಪ್ಪಿದ್ದು, ಪತಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಮೊಂದಲು ಮಕ್ಕಳಾದ ಮಧಿ ಸರ್ವೀಣ್ಯಾ (5), ಒಂದೂ ವರ್ಷದ ಮಗು ಅಕ್ಷಯಾ ಭರಣಿಕಾ ಬೆಂಕಿ ಹಚ್ಚಿರುವ ಇಸಕಿಮುತ್ತು (28) ಹಾಗೂ ಸುಬ್ಬುಲಕ್ಷ್ಮಿ ನಂತರ ತಾವೂ ಬೆಂಕಿ ಹಚ್ಚಿಕೊಂಡಿದ್ದಾರೆ.
ಬಳಿಕ ಸ್ಥಳೀಯರು ನಾಲ್ವರನ್ನೂ ತಿರುನೆಲ್ವೇಲಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮಕ್ಕಳು ಹಾಗೂ ಪತ್ನಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ನಿನ್ನೆ ಜಿಲ್ಲಾಧಿಕಾರಿಗಳ ಜನತಾದರ್ಶನ ಇದ್ದ ಹಿನ್ನಲೆಯಲ್ಲಿ ಮೀಟರ್ ಬಡ್ಡಿ ವ್ಯಾಪಾರಿಗಳ ಕಿರುಕುಳ ಹಾಗೂ ಪೊಲೀಸರ ನಿಷ್ಕ್ರಿಯತೆ ವಿರುದ್ಧ ದೂರು ನೀಡಲು ದಂಪತಿ ಆಗಮಿಸಿದ್ದರು. ಈ ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಿರುನೆಲ್ವೇಲಿ ಜಿಲ್ಲೆಯ ಕಾಶಿ ಧರ್ಮಂ ಗ್ರಾಮದ ಇಸಕಿಮುತ್ತು ಹಾಗು ಸುಬ್ಬುಲಕ್ಷ್ಮಿ ದಂಪತಿ, ಅದೇ ಗ್ರಾಮದ ಮೀಟರ್ ಬಟ್ಟಿ ವ್ಯಾಪಾರಿಯೊಬ್ಬನಿಂದ 8 ತಿಂಗಳ ಹಿಂದೆ 1.45 ಲಕ್ಷ ಸಾಲ ತೆಗೆದಕೊಂಡಿದ್ದಾರೆ. ಬಳಿಕ ಬಡ್ಡಿಯೆಲ್ಲಾ ಸೇರಿ ರೂ.2.34 ಲಕ್ಷ ಪಾವತಿಸಿದ್ದಾರೆ. ಆದರೆ, ಇದಾದ ಬಳಿಕ ದಂಪತಿಗೆ ಈ ವರೆಗೆ ನೀವು ಕಟ್ಟಿದ ರೂ.2.34 ಲಕ್ಷ ಹಣ ಬಡ್ಡಿ ಮಾತ್ರ. ಅಸಲಿನ ಹಣವಾದ ರೂ.1.45 ಲಕ್ಷವನ್ನು ಪ್ರತ್ಯೇಕವಾಗಿ ಕೊಡಬೇಕೆಂದು ಕಿರುಕುಳ ನೀಡುತ್ತಿದ್ದಾರೆಂದು ದಂಪತಿಯ ಬಂಧುಗಳು ಆರೋಪ ಮಾಡಿದ್ದಾರೆ.
ಹಲವು ಬಾರಿ ತಿರುನೆಲ್ವೇಲಿ ಜಿಲ್ಲಾಧಿಕಾರಿಗೆ ಇದರ ವಿರುದ್ಧ ದೂರು ನೀಡಿದ್ದೇವೆ. ಈ ಮನವಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಜಿಲ್ಲಾಧಿಕಾರಿಗಳು ಹಸ್ತಾಂತರಿಸಿದ್ದರು. ಬಳಿಕ ಅಂಚ ಪುತ್ತೂರು ಪಟ್ಟಣದ ಪೊಲೀಸರಿಗೆ ಡಿಸಿಪಿ ಮುಖಾಂತರ ಎಸ್ ಪಿ ಅವರು ದೂರನ್ನು ಹಸ್ತಾಂತರಿಸಿದ್ದರು. ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಮತ್ತೊಂದೆಡೆ ಬಡ್ಡಿ ವ್ಯಾಪಾರಿಗಳ ಕಿರುಕುಳ ಮುಂದುವರೆಯುತ್ತಲೇ ಇದ್ದು ಎಂದು ತಿಳಿಸಿದ್ದಾರೆ.
ಇದರಿಂದ ಹತಾಗೊಂಡಿದ್ದ ದಂಪತಿ ಜನತಾದರ್ಶನದ ವೇಳೆ ದೂರು ನೀಡಲು ಹೋಗಿದ್ದರು. ಬಳಿಕ ಇದ್ದಕ್ಕಿದ್ದಂತೆ ಇಸಕಿಮುತ್ತು ಅವರು ಪತ್ನಿ ಹಾಗೂ ಮಕ್ಕಳಿಗೆ ಬೆಂಕಿ ಹಚ್ಚಿ, ತಾನೂ ಬೆಂಕಿ ಹಚ್ಚಿಕೊಂಡಿದ್ದಾರೆ. ಬಳಿಕ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಬಳಿಕ ಪೊಲೀಸ್ ಅಧಿಕಾರಿಗಳು ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳದಲ್ಲಿ ಏನಾಗುತ್ತಿದೆ...ನಾನು ಏನನ್ನು ನೋಡುತ್ತಿದ್ದೇನೆಂಬುದು ಅರಿವಿಗೆ ಬರಲು ನನಗೆ 20 ನಿಮಿಷ ಕಾಲ ಬೇಕಾಯಿತು. ಮಕ್ಕಳು ಬದುಕುಳಿಯುತ್ತಾರೆಂಬುದು ಸಂಶಯವಾಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos