ದೇಶ

ಸರ್ದಾರ್ ಪಟೇಲರು ಬದುಕಿದ್ದರೆ, ಕಾಶ್ಮೀರ ವಿವಾದ ಇತ್ಯರ್ಥಗೊಳ್ಳತ್ತಿತ್ತು; ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ

Manjula VN
ನವದೆಹಲಿ: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲರು ಬದುಕಿದಿದ್ದರೆ ಕಾಶ್ಮೀರ ವಿವಾದ ಬಗೆಹರಿಯುತ್ತಿತ್ತು ಎಂದು ಬಿಹಾರ ರಾಜ್ಯ ಉಪ ಮುಖ್ಯಮಂತ್ರಿ ಸುಶೀಲ್ ಮೋದಿಯವರು ಮಂಗಳವಾರ ಹೇಳಿದ್ದಾರೆ. 
ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮದಿನ ನಿಮಿತ್ತ ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ದೆಹಲಿಯಲ್ಲಿ ಆಯೋಜಿಸಲಾಗಿದ್ದ 'ರನ್ ಫಾರ್ ಯೂನಿಟಿ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಶೀಲ್ ಮೋದಿಯವರು, ಸರ್ದಾರ್ ಪಟೇಲರು ಬದುಕಿದಿದ್ದರೆ, ಕಾಶ್ಮೀರ ವಿವಾದ ಈ ಹಿಂದೆಯೇ ಬಗೆಹರಿಯುತ್ತಿತ್ತು. ನೆಹರೂ ಬದಲಾಗಿ ಪಟೇಲರೇ ದೇಶದ ಮೊದಲ ಪ್ರಧಾನಮಂತ್ರಿಗಳಾಗಿದ್ದರೆ, ಪ್ರಸ್ತುತ ಭಾರತದಲ್ಲಿರುವ ಸನ್ನಿವೇಶಗಳೇ ಬೇರೆಯೇ ಇರುತ್ತಿತ್ತು. ಸರ್ದಾರ್ ಪಟೇಲರು ಭಾರತದ ವಾಸ್ತುಶಿಲ್ಪಿಯಾಗಿದ್ದರು ಎಂದು ಹೇಳಿದ್ದಾರೆ. 
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಪ್ರಧಾನಿ ಮೋದಿಯವರು ಈ ಹಿಂದಿದ್ದ ಸರ್ಕಾರಗಳು ಸೃರ್ದಾರ್ ಪಟೇಲ್ ರ ಏಕೀಕೃತ ಭಾರತ  ಪರಂಪರೆಯನ್ನು ನಿರ್ಲಕ್ಷಿಸಿದ್ದವು, ಭಾರತ ವಿವಿಧತೆಯಲ್ಲಿ ಏಕತೆ ಎಂಬ ದ್ಯೇಯೋದ್ದೇಶದೊಂದಿಗೆ ಮುಂದೆ ಸಾಗುತ್ತಿದೆ. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವಿಶೇಷತೆಯಾಗಿದೆ. ಆದರೆ ಈ ಸರ್ದಾರ್ ಪಟೇಲರ ಚಿಂತನೆಗಳು ನಿರ್ಲಕ್ಷಕ್ಕೀಡಾಗಿದ್ದವು ಎಂದು ಹೇಳಿದ್ದಾರೆ. 
SCROLL FOR NEXT