ದೇಶ

ಸರ್ದಾರ್ ಪಟೇಲ್ ಜನ್ಮದಿನ ನಿಮಿತ್ತ 'ರನ್ ಫಾರ್ ಯೂನಿಟಿ'ಗೆ ಪ್ರಧಾನಿ ಮೋದಿ ಚಾಲನೆ

Srinivasamurthy VN
ನವದೆಹಲಿ: ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 142ನೇ ಜನ್ಮ ದಿನಾಚರಣೆ ನಿಮಿತ್ತ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ರನ್ ಫಾರ್ ಯೂನಿಟಿ ಓಟಕ್ಕೆ ಪ್ರಧಾನಿ ಮೋದಿ ಮಂಗಳವಾರ ಬೆಳಗ್ಗೆ ದೆಹಲಿಯಲ್ಲಿ ಚಾಲನೆ ನೀಡಿದರು.
ದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಿಂದ ರನ್ ಫಾರ್ ಯೂನಿಟಿ ಓಟಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಈ ವೇಳೆ ಹಲವು ಕೇಂದ್ರ ಸಚಿವರು, ಖ್ಯಾತ ಕ್ರೀಡಾಪಟುಗಳೊಂದಿಗೆ ಸಾವಿರಾರು ಮಂದಿ ಓಟಗಾರರು  ಪಾಲ್ಗೊಂಡಿದ್ದಾರೆ. 1.5 ಕಿ.ಮೀ ದೂರದ ಓಟ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಿಂದ ಆರಂಭವಾಗಿ ಇಂಡಿಯಾಗೇಟ್,  ಸಿ-ಹೆಕ್ಸಾಗನ್ ಮೂಲಕ ಸಾಗಿ ಜಹಜಹಾನ್ ರಸ್ತೆಯಲ್ಲಿ ಪೂರ್ಣಗೊಂಡಿದೆ.
ಇದ್ಕಕೂ ಮೊದಲು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನ ಮಂತ್ರಿ ಮೋದಿ ಮತ್ತು ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರು ಪಟೇಲ್ ಬೀದಿಯಲ್ಲಿರುವ ಸರ್ದಾರ್ ಪಟೇಲ್  ಪ್ರತಿಮೆ ಹೂವಿನ ಮಾಲೆ ಹಾಕಿ ಗೌರವವನ್ನು ಅರ್ಪಿಸಿದರು.
ಈ ಪೇಳೆ ಮಾತನಾಡಿದ ಪ್ರಧಾನಿ ಮೋದಿ, ಸರ್ದಾರ್ ಪಟೇಲ್ ಅವರ ಜನ್ಮ ದಿನ ಜಯಂತಿ ನಿಮಿತ್ತ ಅವರ ಸೇವೆಗೆ ನಾವು ವಂದಿಸುತ್ತೇವೆ. ಭಾರತ ದೇಶದ ಆಭಿವೃದ್ಧಿ, ಏಕತೆಯಲ್ಲಿ ಅವರ ಸೇವೆ ಸ್ಮರಣೀಯ. ಭಾರತ ದೇಶದ  ಪ್ರಜೆಗಳು ಎಂದಿಗೂ ಅವರನ್ನು ಮರೆಯುವುದಿಲ್ಲ ಎಂದು ಹೇಳಿದರು.
ಅಂತೆಯೇ ಕೇಂದ್ರಸರ್ಕಾರ ಅಕ್ಟೋಬರ್ 31 ಅಂದರೆ ಸರ್ದಾರ್ ಪಟೇಲ್ ಅವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಏಕತಾ ದಿವಸ್ ಆಗಿ ಆಚರಣೆ ಮಾಡುತ್ತಿದೆ.
ಇನ್ನು ಕಾರ್ಯಕ್ರಮದಲ್ಲಿ ಖ್ಯಾತ ಜಿಮ್ನಾಸ್ಟ್ ದೀಪಾ ಕರ್ಮಾಕರ್, ಕರ್ಣಮ್ ಮಲ್ಲೇಶ್ವರಿ, ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಪಾಲ್ಗೊಂಡಿದ್ದರು.
ಹಿಮಾಚಲ ಪ್ರದೇಶದಲ್ಲಿ ಓಟಕ್ಕೆ ಅಮಿತ್ ಶಾ ಚಾಲನೆ
ಇನ್ನು ಹಿಮಾಚಲ ಪ್ರದೇಶದಲ್ಲಿ ರನ್ ಫಾರ್ ಯೂನಿಟಿ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಯಾಧ್ಯಕ್ಷ ಅಮಿತ್ ಶಾ ಅವರು ಚಾಲನೆ ನೀಡಿದರು. ಅಂತೆಯೇ ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲೂ ರನ್ ಫಾರ್ ಯೂನಿಟಿ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗಿದೆ.
SCROLL FOR NEXT