ಸಂಗ್ರಹ ಚಿತ್ರ 
ದೇಶ

ಬ್ಲೂವೇಲ್ ಚಾಲೆಂಜ್: ಪುದುಚೆರಿಯಲ್ಲಿ ಮಹಿಳೆಯ ರಕ್ಷಣೆ

ಸಾವಿನ ಆಟ ರಷ್ಯಾದ ಮೂಲಕ ಬ್ಲೂವೇಲ್ ಆಟದ ಚಟಕ್ಕೆ ಅಂಟಿಕೊಂಡು ಆಟದ ಕೊನೆಯ ಹಂತದಲ್ಲಿ ಮನೆ ತೊರೆದಿದ್ದ 21 ವರ್ಷದ ಮಹಿಳೆಯೊಬ್ಬರನ್ನು ಪೊಲೀಸರು...

ಪುದುಚೆರಿ: ಸಾವಿನ ಆಟ ರಷ್ಯಾದ ಮೂಲಕ ಬ್ಲೂವೇಲ್ ಆಟದ ಚಟಕ್ಕೆ ಅಂಟಿಕೊಂಡು ಆಟದ ಕೊನೆಯ ಹಂತದಲ್ಲಿ ಮನೆ ತೊರೆದಿದ್ದ 21 ವರ್ಷದ ಮಹಿಳೆಯೊಬ್ಬರನ್ನು ಪೊಲೀಸರು ಭಾನುವಾರ ರಕ್ಷಮೆ ಮಾಡಿದ್ದಾರೆ. 
ಮಹಿಳೆಯೊಬ್ಬರು ಅಸಹಜವಾಗಿ ವರ್ತನೆ ತೋರುತ್ತಿದ್ದು, ಶನಿವಾರ ರಾತ್ರಿಯಿಂದ ಮನೆಗೆ ಹಿಂತಿರುಗಿಲ್ಲ ಎಂಬ ಮಾಹಿತಿಯೊಂಬು ಮಹಿಳೆಯ ಗೆಳೆಯರು ವಾಟ್ಸ್ ಅಪ್ ನಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಂತೆ ಮಹಿಳೆಗಾಗಿ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ. ತೀವ್ರ ಹುಡುಕಾಟದ ಬಳಿಕ ಭಾನುವಾರ ಬೆಳಿಗ್ಗೆ ಗಾಂಧಿ ಥಿಡಾಲ್ ಬಳಿ ಮಹಿಳೆ ದೊರಕಿದ್ದಳು ಎಂದು ಪೊಲೀಸ್ ಅಧಿಕಾರಿ ಎಸ್.ಕೆ. ಗೌತಮ್ ಅವರು ಹೇಳಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಸ್ಥಳೀಯರ ಜನರ ಸಮಸ್ಯೆಗಳು ಹಾಗೂ ದೂರುಗಳಿಗಾಗಿ ಸಬ್ ಇನ್ಸ್ ಪೆಕ್ಟರ್ ಕೀರ್ತಿ ಎಂಬುವವರು ವಾಟ್ಸ್ ಅಪ್ ಗ್ರೂಪ್ ರಚಿಸಿದ್ದರು. ನಾಪತ್ತೆಯಾಗಿದ್ದ ಮಹಿಳೆ ಬ್ಯಾಂಕ್ ಉದ್ಯೋಗಸ್ಥೆಯಾಗಿದ್ದರು. ರಕ್ಷಣೆ ಮಾಡಿದ ಬಳಿಕ ಮಹಿಳೆಯ ಕೈ ಮೇಲೆ ಬ್ಲೂವೇಲ್ ಚಿತ್ರ ಬರೆದಿರುವುದು ಕಂಡು ಬಂದಿತ್ತು. ಕೆಲ ದಿನಗಳ ಹಿಂದೆ ಮಹಿಳೆ ತನ್ನ ಕೊಠಡಿಯಲ್ಲಿ ತಾನೇ ಬಂಧಿಯಾಗಿದ್ದಳು ಎಂದು ಗೌತಮ್ ಅವರು ಹೇಳಿದ್ದಾರೆ. 
ಪ್ರಸ್ತುತ ಮಹಿಳೆಯನ್ನು ಆಕೆಯ ಪೊಲೀಸರ ವಶಕ್ಕೆ ನೀಡಲಾಗಿದ್ದು, ಮನೋವೈದ್ಯರ ಬಳಿ ಕೌನ್ಸಿಲಿಂಗ್ ಕೊಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 
ವ್ಯಕ್ತಿಗಳು ಅಸಹಜವಾಗಿ ವರ್ತನೆ ತೋರುತ್ತಿರುವುದು ಕಂಡು ಬಂದಿದ್ದೇ ಆದರೆ, ಜನರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಅಪಾಯಕಾರಿ ಆಟ ಬ್ಲೂವೇಲ್ ಕುರಿತಂತೆ ಜಾಗೃತಿ ಮೂಡಿಸಲು ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ. 
ಇದೇ ವೇಳೆ ಮಹಿಳೆಯನ್ನು ರಕ್ಷಣೆ ಮಾಡಿದ ಪೊಲೀಸರಿಗೆ ರೂ.2000 ಬಹುಮಾನವನ್ನು ಡಿಜಿಪಿ ಘೋಷಣೆ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್: ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

ಪ್ರತಿಪಕ್ಷಗಳು ಸಂಪುಟದಿಂದ ವಜಾಕ್ಕೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್!

ದೇಶದ ಅತ್ಯಂತ ದುಬಾರಿ ಪೆಂಟ್‌ಹೌಸ್! ಈ ಐಷಾರಾಮಿ ಮನೆ 271 ಕೋಟಿಗೆ ಮಾರಾಟ!

ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೋಗಿದ್ದ ಟೆಕ್ಕಿ ನಾಪತ್ತೆ: ಲ್ಯಾಪ್‌ಟಾಪ್‌ನಲ್ಲಿ ಶಾಂತಲಾ ಡ್ರಾಪ್‌ ಪಾಯಿಂಟ್‌ ಸರ್ಚ್‌; ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

ರಷ್ಯಾ ಮೇಲೆ ಉಕ್ರೇನ್ ಭೀಕರ ದಾಳಿ: 13 ಮಂದಿ ಬಲಿ, 75 ಜನರಿಗೆ ಗಾಯ; ಇದು 4 ವರ್ಷಗಳಲ್ಲೇ ಅತ್ಯಂತ ಡೆಡ್ಲಿ ಅಟ್ಯಾಕ್!