ರಾಮ್ ರಹೀಮ್ ಸಿಂಗ್ ಮತ್ತು ಹನಿಪ್ರೀತ್ ಇನ್ಸಾನ್ 
ದೇಶ

ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿರುವ ದತ್ತು ಪುತ್ರಿ: ಹನಿಪ್ರೀತ್ ಭೇಟಿ ಮಾಡಲು ಬಯಸಿದ ರಾಮ್ ರಹೀಂ

ಅತ್ಯಾಚಾರ ಪ್ರಕರಣದಲ್ಲಿ ರೋಹ್ಟಕ್ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಗುರ್ಮೀತ್ ರಹೀಂ ಸಿಂಗ್ ತಾನು ಭೇಟಿ ಮಾಡಲು ಬಯಸಿರುವ 10 ...

ಚಂಡಿಗಢ: ಅತ್ಯಾಚಾರ ಪ್ರಕರಣದಲ್ಲಿ ರೋಹ್ಟಕ್ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಗುರ್ಮೀತ್ ರಹೀಂ ಸಿಂಗ್ ತಾನು ಭೇಟಿ ಮಾಡಲು ಬಯಸಿರುವ 10 ಮಂದಿಯ ಹೆಸರುಗಳ ಪಟ್ಟಿಯನ್ನು ಅಧಿಕಾರಿಗಳಿಗೆ ನೀಡಿದ್ದಾನೆ.
ಅದರಲ್ಲಿ ತನ್ನ ಆಪ್ತೆ ಹಾಗೂ ದತ್ತು ಪುತ್ರಿ ಹನಿಪ್ರೀತ್ ಹೆಸರು ಕೂಡ ಸೇರಿದೆ. ಆದರೆ ಬಂಧನ ಭೀತಿಯಿಂದ ಹನಿಪ್ರೀತ್ ತಲೆ ಮರೆಸಿಕೊಂಡಿದ್ದಾಳೆ. 
ಇನ್ನೂ ಪಟ್ಟಿಯಲ್ಲಿ ರಾಮ್ ರಹೀಂ ತಾಯಿ ನಸೀಬ್ ಕೌರ್, ಕುಟುಂಬದ ಸದಸ್ಯರು. ಡೇರಾ ಸಚ್ಚಾ ಸೌಧದ ಸಿಇಓ ಹೆಸರಿದೆ. ರಾಮ್ ರಹೀಮ್ ಕುಟುಂಬ ರಾಜಸ್ತಾನದ ಶ್ರೀಗಂಗಾ ನಗರದ ಗುರುಸರ್ ಮೋಡಿಯಾ ಗ್ರಾಮದಲ್ಲಿ ವಾಸವಿದೆ.
ಡೇರಾ ಸಚ್ಚಾ ಸೌಧ ಹಿಂಬಾಲಕರಿಂದ ಹರ್ಯಾಣ ಪೊಲೀಸರು ಸೋಮವಾರ 33 ಪರವಾನಗಿ ಇರುವ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಂಡಿದ್ದಾರೆ, ಇದರ ಜೊತೆಗೆ ಕಳೆದ ಕೆಲವು ದಿನಗಳಲ್ಲಿ 27 ಶಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ರಾಮ್ ರಹೀಮ್ ಬಂಧನದ ಬಳಿಕ ಆಗಸ್ಟ್ 25 ರಿಂದಲೂ ಸುಧೀರ್ಘವಾಗಿ ಆಶ್ರಮದ ಮೇಲೆ ದಾಳಿ ನಡೆಸಿರುವ ಹರಿಯಾಣ ಪೊಲೀಸರು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

ಶಾಂತಿ ಮಾತುಕತೆ ವಿಫಲ: ಅಮೆರಿಕ ಟೆಹ್ರಾನ್‌ನ ವಿಶ್ವಾಸ ಗಳಿಸಲು ಸಾಧ್ಯವಾಗಲಿಲ್ಲ; ಇರಾನ್ ಸ್ಪೀಕರ್

SCROLL FOR NEXT