ಪಾಟ್ನಾ: ಜೆಡಿಯು-ಆರ್ ಜೆಡಿ ಪಕ್ಷಗಳ ನಡುವಿನ ಮೈತ್ರಿ ಕಡಿತವಾಗಿ ವಾರಗಳ ಬಳಿಕ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಪಕ್ಷ ನಾಯಕ ತೇಜಸ್ವಿ ಯಾದವ್ ನೆರವು ಕೋರಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಮೂಲಗಳ ಪ್ರಕಾರ ತೇಜಸ್ವಿ ಯಾದವ್ ತಂಗಿರುವ ಪಾಟ್ನಾದ ಸರ್ಕ್ಯುಲರ್ ರೋಡ್ ನ ನಂಬರ್ 5 ಬಂಗಲೆಯನ್ನು ಬದಲಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಈ ಹಿಂದೆ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸರ್ಕಾರ ಅವರಿದೆ ನಂಬರ್ 5 ಬಂಗಲೆಯನ್ನು ಅವರಿಗೆ ನೀಡಿತ್ತು. ಆದರೆ ಇದೀಗ ಜೆಡಿಯು ಮೈತ್ರಿ ಮುರಿದುಕೊಂಡಿದ್ದು, ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿ ಸ್ಥಾನದಿಂದ ವಿಪಕ್ಷ ನಾಯಕನ ಸ್ಥಾನದಲ್ಲಿದ್ದಾರೆ. ಹೀಗಾಗಿ ಪ್ರಸ್ತುತ ವಿಪಕ್ಷ ನಾಯಕನಾಗಿರುವ ಸುಶೀಲ್ ಕುಮಾರ್ ಮೋದಿ ಹಾಗೂ ತೇಜಸ್ವಿ ಯಾದವ್ ತಮ್ಮ ತಮ್ಮ ಬಂಗಲೆಗಳನ್ನು ಬದಲಿಸಿಕೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರು.
ಈ ಸೂಚನೆಯೇ ತೇಜಸ್ವಿ ಯಾದವ್ ಮುಜುಗರಕ್ಕೆ ಕಾರಣವಾಗಿದ್ದು, ಪ್ರಸ್ತುತ ಸರ್ಕಾರ ನೀಡಿರುವ ವಿಪಕ್ಷ ನಾಯಕರ ಬಂಗಲೆ ಇಲ್ಲಿಂದ ಕಿ.ಮೀ ಗಟ್ಟಲೆ ದೂರವಿದೆ. ಆದರೆ ಪ್ರಸ್ತುತ ತೇಜಸ್ವಿ ಯಾದವ್ ತಂಗಿರುವ ಸರ್ಕಾರಿ ಬಂಗಲೆ ಸಿಎಂ ನಿತೀಶ್ ಕುಮಾರ್ ಯಾದವ್ ಹಾಗೂ ತಮ್ಮ ತಂದೆ ಲಾಲು ಪ್ರಸಾದ್ ಯಾದವ್ ಅವರ ಬಂಗಲೆಗೆ ಕೂಗಳತೆ ದೂರದಲ್ಲಿದೆ. ಅಲ್ಲದೆ ಇಲ್ಲಿಂದ ಬಿಹಾರ ವಿಧಾನಸಭೆಯೂ ಹತ್ತಿರದಲ್ಲಿದೆ. ಇದೇ ಕಾರಣಕ್ಕೆ ಬಂಗಲೆ ಬದಲಿಸಲು ತೇಜಸ್ವಿಯಾದವ್ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೇ ತೇಜಸ್ವಿ ಯಾದವ್ ತಾವು ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಬಂಗಲೆಯನ್ನು ತಮಗಿಷ್ಟ ಬಂದಂತೆ ಬದಲಿಸಿಕೊಂಡಿದ್ದರು.
ಆದರೆ ನೂತನ ಬಂಗಲೆಗೆ ತೆರಳಿದರೆ ಮತ್ತೆ ಅಲ್ಲಿ ದುರಸ್ತಿ ಕಾರ್ಯ ನಡೆಸಲು ಸಮಯ ಬೇಕಾಗುತ್ತದೆ. ಇದೇ ಕಾರಣಕ್ಕೆ ತೇಜಸ್ವಿಯಾದವ್ ಬಂಗಲೆ ಬದಲಾವಣೆಗೆ ಹಿಂದೇಟು ಹಾಕುತ್ತಿದ್ದು, ಈ ಬಗ್ಗೆ ಸಿಎಂ ನಿತೀಶ್ ಕುಮಾರ್ ಅವರಿಗೆ ಪತ್ರಬರೆದು ಬಂಗಲೆ ಬದಲಾವಣೆ ಸೂಚನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics