ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ಅತ್ಯಾಚಾರ: ಬಿಜೆಪಿ ನಾಯಕನ ವಿರುದ್ಧ ಮಹಿಳೆ ದೂರು
ಮದುವೆಯಾಗುವುದಾಗಿ ನಂಬಿಸಿ ಬಿಜೆಪಿ ಕಾರ್ಪೋರೇಟರ್ ದಯ ಗಾಯಕ್ವಾಡ್ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ...
ಕಲ್ಯಾಣ್: ಮದುವೆಯಾಗುವುದಾಗಿ ನಂಬಿಸಿ ಬಿಜೆಪಿ ಕಾರ್ಪೋರೇಟರ್ ದಯ ಗಾಯಕ್ವಾಡ್ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಲ್ಯಾಣ್-ದೊಂಬಿವ್ಲಿ ಮುನಿಸಿಪಲ್ ಕಾರ್ಪೋರೇಷನ್ ನ ಕಾರ್ಪೋರೇಟರ್ ದಯ ಗಾಯಕ್ವಾಡ್ ಅವರು ಎನ್ಸಿಪಿ ಮಹಿಳಾ ಘಟಕದ ಮುಖ್ಯಸ್ಥೆ ಕಲ್ಯಾಣ್ ಅಶ್ವಿನಿ ದುಮಾಲ್ ಮತ್ತು ಆಕೆಯ ಪತಿ ಮನೋಜ್ ಜತೆ ಸೇರಿ ನನ್ನ ಮೇಲೆ ಅತ್ಯಾಚಾರ ನಡೆಸಿದ ದೃಶ್ಯಗಳನ್ನು ಸೆರೆಹಿಡಿದು ಇದೀಗ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಥಾಣೆ ಪೊಲೀಸರಿಗೆ 27 ವರ್ಷದ ಮಹಿಳೆ ದೂರು ನೀಡಿದ್ದಾರೆ.
ಅತ್ಯಾಚಾರ ಆರೋಪವನ್ನು ತಳ್ಳಿ ಹಾಕಿರುವ ದಯ ಗಾಯಕ್ವಾಡ್ ಅವರು ಆಕೆ ನನ್ನಿಂದ 10 ಲಕ್ಷ ರುಪಾಯಿಗೆ ಬೇಡಿಕೆ ಇಟ್ಟಿದ್ದಳು. ಹಣ ಕೊಡದಿದ್ದರೇ ನಿಮ್ಮ ಮೇಲೆ ಅತ್ಯಾಚಾರ ಆರೋಪ ಮಾಡುವುದಾಗಿ ಆಕೆ ಬೆದರಿಕೆ ಹಾಕಿದ್ದಳು ಎಂದು ಹೇಳಿದ್ದಾರೆ.
ಮಹಿಳೆ ತನ್ನ ದೂರಿನಲ್ಲಿ ಜೂನ್ 7ರಂದು ಗಾಯಕ್ವಾಡ್ ಅವರು ನನ್ನನ್ನು ಟಿಟ್ವಾಲಾದ ಲಾರ್ಡ್ಜ್ ವೊಂದಕ್ಕೆ ಕರೆದುಕೊಂಡು ಹೋಗಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದರು. ನಂತರ ಜೂನ್ 16ರಂದು ರೆಸಾರ್ಟ್ ವೊಂದಕ್ಕೆ ಕರೆದುಕೊಂಡು ಅಲ್ಲಿಯೂ ಸಹ ನನ್ನನ್ನು ಅತ್ಯಾಚರಿಸಿದರು ಎಂದು ದೂರಿದ್ದಾಳೆ.
ಈ ಪ್ರಕರಣವನ್ನು ಬಗೆಹರಿಸುವುದಾಗಿ ಹೇಳಿ ಅಶ್ವಿನಿ ನನ್ನನ್ನು ಅವರ ಮನೆಗೆ ಕರೆಸಿಕೊಂಡರು. ಅಲ್ಲಿ ಅಶ್ವಿನಿ ಮತ್ತು ಮನೋಜ್ ಮುಂದೆ ಗಾಯಕ್ವಾಡ್ ಮತ್ತೇ ನನ್ನನ್ನು ಅತ್ಯಾಚರಿಸಿದ್ದು ಇದನ್ನು ಅವರಿಬ್ಬರು ಸೆರೆಹಿಡಿದ್ದರು ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾಳೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.